ಯುವತಿ ಕಾಣೆ: ಪ್ರಕರಣ ದಾಖಲು
ಚಿಕ್ಕಮಗಳೂರು, ಅ.27: ಕೊಪ್ಪತಾಲೂಕಿನ ಅತ್ತಿಕೂಡಿಗೆ ಗ್ರಾಮದ ಬಿಳಾಲುಕೊಪ್ಪವಾಸಿ ಶೃತಾ(17) ಎಂಬವರು ನಾಪತ್ತೆಯಾಗಿರುವ ಬಗ್ಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಲ್‌ಟಿಕೆಟ್ ತರುವುದಾಗಿ ಕಾಲೇಜಿಗೆ ಹೋಗಿ ಸಂಜೆ ಮನೆಗೆ ಪೋನ್ ಮಾಡಿ ಸ್ನೇಹಿತೆ ಮನೆಗೆ ಹೋಗುವುದಾಗಿ ಹೇಳಿ ಹೋದವರು ಮನೆಗೆ ಬಂದಿಲ್ಲ. ಎಣ್ಣೆಗೆಂಪು ಬಣ್ಣ, 4.8 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಕೋಲು ಮುಖ, ಕನ್ನಡ, ತುಳು, ಮತ್ತು ತಮಿಳು ಭಾಷೆ ಮಾತನಾಡುವವರಾಗಿದ್ದು, ಮನೆಯಿಂದ ಹೊರಟಾಗ ಅರಿಶಿಣ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಉಪ-ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





