ಗಾಂಜಾ ಪ್ರಕರಣ: ಆರೋಪಿ ನ್ಯಾಯಾಂಗ ಬಂಧನಕ್ಕೆ
ಶಿವಮೊಗ್ಗ, ಅ.27: ಹೊಸನಗರ ತಾಲೂಕು ವ್ಯಾಪ್ತಿಯಲ್ಲಿನ ಗಾಮನಗದ್ದೆ, ಗುಬ್ಬಿಗ ಗ್ರಾಮದ ಕೃಷ್ಣಪ್ಪ ಬಿನ್ ಬಸವನಾಯ್ಕ ಮತ್ತು ಕೃಷ್ಣಮೂರ್ತಿ ಬಿನ್ ಕೊಲ್ಲಾನಾಯ್ಕ ಎಂಬವರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಬೆಳೆಸಿದ್ದ 16ಗಾಂಜಾ ಗಿಡಗಳ ಸಾಗುವಳಿ ಮಾಡಿರುವುದನ್ನು ಗುರುತಿಸಿ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೊಸನಗರ ವಲಯದ ಅಬಕಾರಿ ನಿರೀಕ್ಷಕರು ತಿಳಿಸಿದ್ದಾರೆ.
ಅ. 16ರಂದು ಅಬಕಾರಿ ಉಪ ಆಯುಕ್ತ ಮೋಹನ್ ವೈ.ಆರ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪಅಧೀಕ್ಷಕ ಹನುಮಂತಪ್ಪಡಿ.ಎನ್. ಮತ್ತು ಮೈಲಾನಾಯ್ಕ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.
Next Story





