ಕೊಳ್ಳೇಗಾಲ: ಕನಕದಾಸ ಜಯಂತಿಯ ಪೂರ್ವಭಾವಿ ಸಭೆ

ಕೊಳ್ಳೇಗಾಲ, ಅ.27: ಕನಕದಾಸ ಜಯಂತಿ ಕಾರ್ಯಕ್ರವನ್ನು ಪಟ್ಟಣದ ನ್ಯಾಷನಲ್ ಮೈದಾನದಲ್ಲಿ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಾಸಕ ಆರ್.ನರೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದ ಕನಕದಾಸ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮುಖಂಡರುಗಳು ಸಮ್ಮುಖದಲ್ಲಿ ತೀರ್ಮಾನಿಸಲಾಯಿತು.
ನ.6 ರಂದು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮದ್ದೂರು ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕ ಚನ್ನಲಿಂಗಾನಹಳ್ಳಿ ಬ್ರಹ್ಮಲಿಂಗಗೌಡ ಆಯ್ಕೆ ಮಾಡಲಾಯಿತು. ಎಲ್ಲಾ ಅಧಿಕಾರಿಗಳು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಶಾಸಕ ನರೇಂದ್ರ ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾರಾಜಣ್ಣ, ಕುರುಬರ ಸಂಘದ ಖಂಜಾಚಿ ಸಿದ್ದೇಗೌಡ, ಉಪಾಧ್ಯಕ್ಷ ನಂಜೇಗೌಡ, ಚನ್ನಮಾದೇಗೌಡ, ಕಾರ್ಯನಿರ್ವಾಹಕಾಧಿಕಾರಿ ಡಾ.ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ.ಗೋಪಾಲ್, ಕೃಷಿ ಅಧಿಕಾರಿ ಮಹದೇವ ಹಾಗೂ ಇನ್ನಿತರರು ಹಾಜರಿದ್ದರು.
Next Story





