108 ಅಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಅಂಬ್ಯುಲೆನ್ಸ್ ನಲ್ಲಿ ಜನಿಸಿದ ಮಗುವಿನೊಂದಿಗೆ ಆರೋಗ್ಯ ಸಹಾಯಕಿ
ಮೂಡುಬಿದಿರೆ,ಅ.28: ಆನೆಗುಡ್ಡೆಯಿಂದ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರುವಾಗ ಗರ್ಭಿಣಿಯು 108 ಅಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.
ದರೆಗುಡ್ಡೆ ಗ್ರಾಮದ ಆನೆಗುಡ್ಡೆ ನಿವಾಸಿ ಸತೀಶ್ ಎಂಬವರು ಪತ್ನಿ ಚಂದ್ರಾವತಿ ಎಂಬವರಿಗೆ ಶನಿವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. 108 ವಾಹನದಲ್ಲಿ ಮನೆಯಿಂದ ಮೂಡುಬಿದಿರೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರುವಾಗ ಚಂದ್ರಾವತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯದಿಂದಿದ್ದಾರೆ. ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಶಿಯನ್ ಪದ್ಮಾವತಿ ಅರಸಿನಮಕ್ಕಿ, ಅಂಬ್ಯುಲೆನ್ಸ್ ಚಾಲಕ ಮಾಲತೇಶ್ ಈ ಸಂದರ್ಭ ಉಪಸ್ಥಿತರಿದ್ದರು.
Next Story





