ಅ.29ರಿಂದ ರಸ್ತೆ ಸಂಚಾರ ನಿರ್ಬಂಧ
ಬೆಂಗಳೂರು, ಅ.28: ನಗರದ ಓಕಳಿಪುರಂ ಜಂಕ್ಷನ್‌ನಿಂದ ಫೌಂಟೇನ್ ವೃತ್ತದವರೆಗೆ ಲೂಪ್‌ಗಳೊಂದಿಗೆ 8 ಪಥದ ಕಾರಿಡಾರ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇಂದಿನಿಂದ(ಅ.29) .31 ರವರೆಗೂ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಚಾರ ನಿಷೇಧಿಸಲಾಗಿದೆ.
ಈ ರಸ್ತೆಯ ಬದಲಿಗೆ ಪ್ರತ್ಯೇಕ ಮಾರ್ಗ ನೀಡಿದ್ದು, ರಾಜಾಜಿ ನಗರದಿಂದ ಮೆಜೆಸ್ಟಿಕ್ ಕಡೆಗೆ(ಫೌಂಟೇನ್ ವೃತ್ತ) ಹೋಗುವ ವಾಹನಗಳು ಪಿ.ಎಫ್ ವೃತ್ತದಲ್ಲಿ ಎಡ ತಿರುವು ಪಡೆದು, ಚರ್ಚ್ ಬಳಿ ಯು ಟರ್ನ್ ಪಡೆದು ಫೌಂಟೇನ್ ವೃತ್ತ ತಲುಪಬಹುದು. ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳು ಕೃಷ್ಣ ಫ್ಲೋರ್ ಮಿಲ್ ಬಳಿ ಬಲ ತಿರುವು ಪಡೆದು ಧನ್ವಂತರಿ ರಸ್ತೆ ಮುಖಾಂತರ ಮೆಜೆಸ್ಟಿಕ್ ಕಡೆಗೆ ಹೋಗಬೇಕು.
ಮಲ್ಲೇಶ್ವರಂನಿಂದ ರಾಜಾಜಿನಗರ ಕಡೆಗೆ ಹೋಗುವ ವಾಹನಗಳು ಫೌಂಟೇನ್ ವೃತ್ತದಲ್ಲಿ ಯು ಟರ್ನ್ ಪಡೆದು ಪಿ.ಎಫ್.ವೃತ್ತದ ಮೂಲಕ ರಾಜಾಜಿನಗರ ಕಡೆಗೆ ಹೋಗಬಹುದು. ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟನೆ ತಿಳಿಸಿದೆ.
Next Story





