ಅ.29ರಂದು ಹುಸೈನ್ ದಿನಾಚರಣೆ
ಬೆಂಗಳೂರು, ಅ.28: ವಿಶ್ವಕ್ಕಾಗಿ ಶಾಂತಿ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ಉದ್ದೇಶದಿಂದ ಅ.29ರಂದು ಸಂಜೆ 4 ಗಂಟೆಗೆ ನಗರದ ಹೊಸೂರು ರಸ್ತೆಯಲ್ಲಿರುವ ಶಿಯಾ ಪಂಗಡದ ಶ್ಮಶಾನದ ಮೈದಾನದಲ್ಲಿ ‘ಇಮಾಮ್ ಹುಸೇನ್ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಆಗಾ ಸುಲ್ತಾನ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಸ್ವಾಮಿ ಅಗ್ನಿವೇಶ್, ಮೌಲಾನ ಉಬೇದುಲ್ಲಾ ಖಾನ್ ಆಝ್ಮಿ, ರೆ.ಫಾ.ವಿಕ್ಷರ್ ಎಡ್ವಿನ್, ಮೌಲಾನ ಸೈಯ್ಯದ್ ಅಖಿಲ್ ಘರಾವಿ, ಡಾ.ಸೈಯ್ಯದ್ ಅಮ್ಮಾರ್ ನಕ್ಷವಾನಿ ಹಾಗೂ ಪ್ರಬ್ಜೋತ್ ಸಿಂಗ್ ಬಾಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.
Next Story





