ವಿದ್ಯಾರ್ಥಿ ನಾಪತ್ತೆ: ಅಪಹರಣ ಶಂಕೆ

ಕುಂದಾಪುರ, ಅ.28: ಕುಂದಾಪುರ ಆರ್‌ಎನ್‌ಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ, ತಲ್ಲೂರು ನಿವಾಸಿ ನಾಗರತ್ನ ಎಂಬ ವರ ಮಗ ಸೌರಭ್(17) ಎಂಬಾತ ನಾಪತ್ತೆಯಾಗಿದ್ದಾನೆ.
ಅ.27ರಂದು ಬೆಳಗ್ಗೆ 8:30ರ ಸುಮಾರಿಗೆ ಮನೆಯಿಂದ ಕಾಲೇಜಿಗೆ ಹೋದವನು ಸಂಜೆ 4ಗಂಟೆಗೆ ಕಾಲೇಜು ಮುಗಿಸಿ ಬಸ್ರೂರು ಮೂರುಕೈ ಬಸ್ ನಿಲ್ದಾಣದ ಬಳಿ ಬಸ್ಸಿನಿಂದ ಇಳಿದು ಹೋದವನು ನಾಪತ್ತೆಯಾಗಿದ್ದಾನೆ. ಆತನನ್ನು ದುಷ್ಕರ್ಮಿಗಳು ಅಪಹರಣ ಮಾಡಿರಬಹುದೆಂದು ಶಂಕಿಸಿ ದೂರು ನೀಡಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





