ಪ್ರೊ ಕಬಡ್ಡಿ :ಪಾಟ್ನಾಕ್ಕೆ ಹ್ಯಾಟ್ರಿಕ್ ಕಿರೀಟ

ಚೆನ್ನೈ, ಅ.28: ಪಾಟ್ನಾ ಪೈರೇಟ್ಸ್ ತಂಡ ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಶನಿವಾರ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು 55-38 ಅಂತರದಲ್ಲಿ ಬಗ್ಗು ಬಡಿದು ಸತತ ಮೂರನೆ ಬಾರಿ ಪ್ರಶಸ್ತಿ ಜಯಿಸಿದೆ
ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ಗೆ ಮೊದಲ ಬಾರಿ ಫೈನಲ್ ತಲುಪಿದ್ದರೂ,ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಈಡೇರಲಿಲ್ಲ.
ಪಾಟ್ನಾ ತಂಡದ ನಾಯಕ ಪ್ರದೀಪ್ 19 ಪಾಯಿಂಟ್ಸ್ ಸಂಪಾದಿಸಿ ತಂಡಕ್ಕೆ ಮೂರನೆ ಬಾರಿ ಪ್ರಶಸ್ತಿ ಗೆಲ್ಲಲು ದೊಡ್ಡ ಕೊಡುಗೆ ನೀಡಿದರು.
ಪ್ರದೀಪ್ ತಂಡದ ಮೊನು ಗೋಯತ್ 9 ಪಾಯಿಂಟ್ಸ್,ವಿಜಯ್ 7 ಮತ್ತು ಜೈದೀಪ್ 5 ಪಾಯಿಂಟ್ಸ್ ಜಮೆ ಮಾಡಿದರು. ಇದರೊಂದಿಗೆ ಪಾಟ್ನಾ ಈಗಾಗಲೇ ನಡೆದಿರುವ ಐದು ಆವೃತ್ತಿಗಳಲ್ಲಿ ಮೂರನೆ ಬಾರಿ ಟ್ರೋಫಿಯನ್ನು ಎತ್ತಿದ ಯಶಸ್ವಿ ತಂಡವಾಗಿದೆ.
20ರ ಹರೆಯದ ಪ್ರದೀಪ್ ಮೂರು ಪ್ಲೇ ಆಫ್‌ಗಳಲ್ಲಿ 76 ಪಾಯಿಂಟ್ಸ್ ಕಲೆ ಹಾಕಿದ್ದರು. ಅವರು ಐದನೆ ಆವೃತ್ತಿಯಲ್ಲಿ ಒಟ್ಟು 369 ರೈಡ್ ಪಾಯಿಂಟ್ಸ್ ಕಲೆ ಸಂಪಾದಿಸಿದ್ದಾರೆ.
ಮೂರು ತಿಂಗಳುಗಳ ಕಾಲ ನಡೆದ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಉಭಯ ತಂಡಗಳು ಬೆಂಗಾಲ್ ವಾರಿಯರ್ಸ್ ತಂಡವನ್ನು ಅಂತಿಮ ಪಂದ್ಯದಲ್ಲಿ ಮಣಿಸಿ ಫೈನಲ್ ತಲುಪಿದ್ದವು.
ಪಾಟ್ನಾ ಪೈರೇಟ್ಸ್ ತಂಡ ಕ್ವಾಲಿಫೈೆಯರ್ -2ನೆ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು 47-44 ಅಂತರದಿಂದ ಮಣಿಸಿ ಫೈನಲ್ ತಲುಪಿತ್ತು.
ಮೊದಲ ಬಾರಿ ಕಣಕ್ಕಿಳಿದಿದ್ದ ಗುಜರಾತ್ ಫಾರ್ಚೂನ್‌ಜೈಂಟ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 42-17 ಅಂತರದಲ್ಲಿ ಜಯ ಸಾಧಿಸಿ ಮೊದಲ ಬಾರಿ ಪ್ರಶಸ್ತಿಯ ಸುತ್ತು ಪ್ರವೇಶಿಸಿತ್ತು.







