ವಾಟ್ಸಾಪ್ ಗ್ರೂಪ್‌ನಲ್ಲಿ ನಿಂದನೆ: ದೂರು ಪ್ರತಿದೂರು
ಕಾರ್ಕಳ, ಅ.28: ವಾಟ್ಸಾಪ್ ಗ್ರೂಪ್‌ನಲ್ಲಿ ನಡೆಸಲಾದ ವೈಯಕ್ತಿಕ ನಿಂದನೆ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾಗಿವೆ.
ನಲ್ಲೂರಿನ ಕೃಷ್ಣ ಎ.ಶೆಟ್ಟಿ ಎಂಬವರಿಗೆ ಬಿಜೆಪಿ ಯುವಮೋರ್ಚಾದ ವಿಖ್ಯಾತ್ ಶೆಟ್ಟಿ, ವಿಜಯ ಸಪಳಿಗೆ, ನಿಖಿಲ್ ಆಚಾರ್ಯ ಕಾರ್ಕಳ ಎಂಬವರು ಸೇರಿಕೊಂಡು ಪೊಲಿಟಿಕಲ್ ಫೈಟರ್ ಎಂಬ ವಾಟ್ಸ್‌ಅಪ್ ಗ್ರೂಪಿನಲ್ಲಿ ವೈಯಕ್ತಿಕವಾಗಿ ನಿಂದಿಸಿ, ನಂತರ ಫೋನ್ ಕರೆ ಮಾಡಿ ಕಾರ್ಕಳ ಗೊಮ್ಮಟಬೆಟ್ಟದ ಬಳಿ ಹಲ್ಲೆ ನಡೆಸಿ ಕೊಲ್ಲುವುದಾಗಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಮತ್ತು ಇವರು ಮೂವರು 30 ಜನರನ್ನು ಒಗ್ಗೂಡಿಸಿ ಕೃಷ್ಣ ಶೆಟ್ಟಿಗೆ ಹಲ್ಲೆ ಮಾಡಲು ಕಾದು ಕುಳಿತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಪ್ರತಿದೂರು: ಕಾರ್ಕಳದ ವಿಖ್ಯಾತ್ ಶೆಟ್ಟಿ ಎಂಬವರ ತಂದೆ ವಿಜಯ ಶೆಟ್ಟಿ ಯವರ ಮಾನಹಾನಿ ಮಾಡುವ ಉದ್ದೇಶದಿಂದ 3 ದಿನಗಳ ಹಿಂದೆ ಪೊಲಿಟಿ ಕಲ್ ಫೈಟರ್ ಎಂಬ ವಾಟ್ಸ್‌ಅಪ್ ಗ್ರೂಪ್‌ನಲ್ಲಿ ಕೃಷ್ಣ ಎ.ಶೆಟ್ಟಿ ನಿರಂತರ ಮಾನ ಹಾನಿ ಹೇಳಿಕೆಗಳನ್ನು ಪ್ರಸಾರಗೊಳಿಸುತ್ತಿದ್ದಾರೆ. ಅಲ್ಲದೆ ವಿಖ್ಯಾತ್ ಶೆಟ್ಟಿಯ ವಾಟ್ಸ್‌ಅಪ್‌ಗೆ ಕೊಲ್ಲುವ ಜೀವ ಬೆದರಿಕೆಯನ್ನು ಸಂದೇಶವನ್ನು ಕೂಡ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿ ರುವ ಕಾರ್ಕಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







