ಕೊಳ್ಳೇಗಾಲ: 1 ಕೋಟಿ 5 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ನರೇಂದ್ರ ಚಾಲನೆ

ಕೊಳ್ಳೇಗಾಲ, ಅ.28: ಹನೂರು ತಾಲೂಕಿನ ಹ್ತೊಂಡರಬಾಳು ಹಾಗೂ ಸತ್ತೇಗಾಲ, ಕೋತ್ತ ನೂರು, ಇಕ್ಕಡಹಳ್ಳಿ, ಕಣ್ಣೂರು ಗ್ರಾಮಗಳಿಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಮುಖ್ಯ ಮಂತ್ರಿ ವಿಶೇಷ ಅನುದಾನ ಯೋಜನೆಯಡಿಯಲ್ಲಿ ಒಟ್ಟು1 ಕೋಟಿ 5 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿಗಳಿಗೆ ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಶನಿವಾರ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಆರ್.ನರೇಂದ್ರ, ಶ್ರೀಮಾನ್ಯ ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಹೊಂಡರಬಾಳು ಗ್ರಾಮದ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, ಅದೇ ಯೋಜನೆಯಡಿಯಲ್ಲಿ ಸತ್ತೇಗಾಲ, ಕೊತ್ತನೂರು ಗ್ರಾಮಗಳಿಗೆ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 50 ಲಕ್ಷ ರೂ. ಮತ್ತು ಇಕ್ಕಡಹಳ್ಳಿ ಹಾಗೂ ಕಣ್ಣೂರು ಗ್ರಾಮಕ್ಕೆ ಎಂಎಡಿಪಿ ಅನುದಾನದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ 35 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದೇವೆ. ಅದೇ ರೀತಿ ರಸ್ತೆಗಳಿಲ್ಲದ ಗ್ರಾಮಗಳಲ್ಲಿಯೂ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ರಸ್ತೆಗಳು ಗುಂಡಿ ಬೀಳದಂತೆ ಕೂಡಲೇ ಅದನ್ನು ಮುಚ್ಚುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕ ಜಿಲ್ಲಾಧ್ಯಕ್ಷ ಗುರುಮಲ್ಲಪ್ಪ ಜಿ.ಪಂಸದಸ್ಯೆ ಶಿವಮ್ಮ ಕೃಷ್ಣನಾಯಕ, ಮತ್ತೊಬ್ಬ ಜಿ.ಪಂ ಸದಸ್ಯೆ ಜಯಂತಿ, ಲೇಖರವಿ, ರವಿ ತಾ.ಪಂ ಅಧ್ಯಕ್ಷ ರಾಜು, ತಾ.ಪಂ ಸದಸ್ಯರಾದ ಅರುಣ್ ಕುಮಾರ್, ಪುಷ್ಪಗುಣಶೇಖರ್ ಗ್ರಾ.ಪಂ ಅಧ್ಯಕ್ಷೆ ಮಂಜುಳ ನಂಜುಂಡ ಮೂರ್ತಿ, ಸರಸ್ವತಿ ಸೀಗನಾಯಕ, ಮಾಜಿ ಜಿ.ಪಂ ಸದಸ್ಯ ಯಡಕೂರಿಯಾ ಮಾದೇವ, ಅಧಿಕಾರಿಗಳಾದ ಸಿದ್ದಪ್ಪಜಿಗೌಡ, ಭೂಸೇನೆ ಇಲಾಖೆಯ ರಮೇಶ್, ಮಂಜು, ಆರ್.ಎಂ.ಸಿ.ಮಾರುಕಟ್ಟೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿಸದಸ್ಯ ಮಾದೇಗೌಡ, ಜಯರಾಜು, ಮುಖಂಡರುಗಳಾದ ಪುಟ್ಟರಾಜು, ಕೆಂಪಯ್ಯ, ಮಹದೇವಸ್ವಾಮಿ, ಶಿವಶಂಕರ್, ಮಹದೇವು, ಗುತ್ತಿಗೆದಾರರಾದ ಫಯಾಝ್, ಪ್ರಸಾದ್, ಮತಿನ್, ಹರ್ಷ, ಜಗದೀಶ್, ನಂಜುಂಡಮೂರ್ತಿ, ಸಿದ್ದರಾಜು ಮತ್ತಿತರರು ಹಾಜರಿದ್ದರು.







