ಪ್ರತಿಯೊಬ್ಬರಲ್ಲಿ ಕಾನೂನಿನ ಅರಿವು ಇದ್ದಾಗ ಕಾನೂನು ಉಲ್ಲಂಘನೆಯಾಗುವ ಸಾಧ್ಯತೆ ಕಡಿಮೆ: ಷಣ್ಮುಗ ವರ್ಮ

ಹನೂರು, ಅ.28: ಪ್ರತಿಯೊಬ್ಬರಲ್ಲಿ ಕಾನೂನಿನ ಅರಿವು ಇದ್ದಾಗ ಕಾನೂನಿನ ಉಲ್ಲಂಘನೆಯಾಗುವ ಸಾಧ್ಯತೆಗಳು ಕಡಿಮೆ ಎಂದು ಮಹದೇಶ್ವರನಬೆಟ್ಟದ ಆರಕ್ಷಕ ನಿರೀಕ್ಷಕರಾದ ಷಣ್ಮುಗವರ್ಮ ತಿಳಿಸಿದ್ದಾರೆ.
ಮಹದೇಶ್ವರನಬೆಟ್ಟದಲ್ಲಿ ಮಾನಸ ಶಿಕ್ಷಣ ಸಂಸ್ಥೆಯ ದ್ವಿತೀಯ ಬಿಎಡ್ ವಿದ್ಯಾರ್ಥಿಗಳ ಸಮುದಾಯ ಜೀವನ ತರಬೇತಿ ಶಿಬಿರದಲ್ಲಿ ಮಾತನ್ನಾಡುತ್ತಾ, ಸಂಚಾರಿ ನಿಯಮಕ್ಕೆ ಸಂಬಂಧಿಸಿದಂತೆ ಎಲ್ಮೆಟ್ ಧರಿಸದೇ ಇರುವುದು ಮತ್ತು ಸಂಚಾರಿ ನಿಯಮ ಉಲಂಘನೆ ಮಾಡುವುದರಿಂದ ಅಪಘಾತಗಳಲ್ಲಿ ಸಾವು ಸಂಭವಿಸುತ್ತಿವೆ. ವಾಹನಕ್ಕೆ ಇನ್ಸುರೆನ್ಸ್ ಮಾಡಿಸುವುದು ಕಡ್ಡಾಯವಾಗಿದೆ. ಇನ್ಸುರೆನ್ಸ್ ಮಾಡಿಸುವುದು ವಾಹನ ಮತ್ತು ಸವಾರರ ಸುರಕ್ಷೆಗಾಗಿ ಎಂದು ತಿಳಿಸಿದರು.
ಸೈಬರ್ ಕ್ರೈಂ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗಿ ಕಂಡುಬರುತ್ತಿದ್ದು, ಸಾಮಾಜಿಕ ತಾಣಗಳಲ್ಲಿ ಸುರಕ್ಷಿತ ಇಂಟರ್ ನೆಟ್ ಬಳಕೆ ಮಾಡದಿರುವುದು ಮತ್ತು ಅರಿವಿನ ಕೊರತೆಯಿಂದಾಗಿ ಸೈಬರ್ ಅಪರಾಧಗಳು ಹೆಚ್ಚಾಗಿ ಕಂಡು ಬರುತ್ತಿದೆ. ಬಹುತೇಕ ಮೊಬೈಲ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ ಸರ್ವರ್ ಗಳು ಹೊರದೇಶದಲ್ಲಿದ್ದು, ವೈಯಕ್ತಿಕ ವಿಚಾರ, ಪೋಟೊ, ಮಾಹಿತಿಗಳನ್ನು ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಉಳಿಸಿಕೊಳ್ಳದಂತೆ ಹಾಗು ಅನಾಮದೇಯವಾಗಿಬರುವ ಕರೆ ಮತ್ತು ಈ ಮೇಲ್ ಗಳಿಗೆ ಪ್ರತಿಕ್ರಿಯಿಸದಿರುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಚನ್ನಶೆಟ್ಟಿ, ಉಪನ್ಯಾಶಕರಾದ ಶಿವಮ್ಮ, ಕೆಂಪರಾಜು, ಸತೀಶ್, ರಾಜಪ್ಪ, ಶಿಬಿರದ ಸಂಯೋಜಕ ಜಯಕುಮಾರ್ ಮತ್ತಿತರರಿದ್ದರು.







