ಎಲ್ಲಾ ಕಾರುಗಳಲ್ಲೂ ಕಡ್ಡಾಯವಾಗಲಿದೆ ಏರ್ ಬ್ಯಾಗ್, ವೇಗ ನಿಯಂತ್ರಣದ ಎಚ್ಚರಿಕೆ ವ್ಯವಸ್ಥೆ
ರಸ್ತೆ ಅಪಘಾತ ತಡೆಗೆ ಹೊಸ ಕ್ರಮ

ಹೊಸದಿಲ್ಲಿ, ಅ.29: 2019ರ ಜುಲೈ 1ರ ನಂತರ ತಯಾರಿಸಲಾಗುವ ಎಲ್ಲಾ ಕಾರುಗಳಲ್ಲಿ ಏರ್ ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, 80 ಕಿ.ಮೀ. ಮೀರಿದ ವೇಗಕ್ಕೆ ಎಚ್ಚರಿಕೆ ವ್ಯವಸ್ಥೆ, ರಿವರ್ಸ್ ಪಾರ್ಕಿಂಗ್ ಅಲರ್ಟ್ ಗಳನ್ನು ಅಳವಡಿಸಬೇಕಾಗಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಈ ವ್ಯವಸ್ಥೆಗಳ ಅನುಷ್ಠಾನದ ಬಗ್ಗೆ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಿದೆ ಎನ್ನಲಾಗಿದೆ.
ಪ್ರಯಾಣಿಕರ ಸುರಕ್ಷತೆಗಾಗಿ ಅತ್ಯವಶ್ಯಕವಾಗಿರುವ ಈ ವ್ಯವಸ್ಥೆಗಳು ಈಗಾಗಲೇ ವಿಲಾಸಿ ಕಾರುಗಳಲ್ಲಿವೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಯಾಣಿಕರ ಹಾಗು ಪಾದಚಾರಿಗಳ ಸುರಕ್ಷತೆಗಾಗಿ ಈ ಕ್ರಮಗಳನ್ನು ಅಂಗೀಕರಿಸಿದ್ದಾರೆ ಎನ್ನಲಾಗಿದೆ. 2016ರಲ್ಲಿ ಅತೀ ವೇಗದ ಚಲಾವಣೆಯಿಂದ 74 ಸಾವಿರ ಸಾವುಗಳು ಸಂಭವಿಸಿದೆ.
“80 ಕಿ.ಮೀ.ಗಿಂತ ವೇಗ ಹೆಚ್ಚಾದಾಗ ಆಡಿಯೋ ಅಲರ್ಟ್ ನೀಡುವ ವ್ಯವಸ್ಥೆಯನ್ನು ಹೊಸ ಕಾರುಗಳು ಹೊಂದಲಿವೆ. ವೇಗ 100 ಕಿ.ಮೀ. ತಲುಪಿದಾಗ ಈ ಅಲರ್ಟ್ ಮತ್ತಷ್ಟು ತೀವ್ರವಾಗಲಿದೆ” ಎಂದು ಸಾರಿಗೆ ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.
Next Story





