ವಿದ್ಯುತ್ ತಂತಿ ತಗುಲಿ ಮಹಿಳೆ ಮೃತ್ಯು
ಚಿಕ್ಕಮಗಳೂರು, ಅ.29: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆಹೊನ್ನೂರು ಪಟ್ಟಣದಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ವಿಮಲಪೆರೇರಾ(43) ಎಂದು ಗುರುತಿಸಲಾಗಿದೆ.
ವಿಮಲಪೆರೇರಾ ಅವರು ತಮ್ಮ ಮನೆಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ಲೈನ್‍ನಿಂದ ವಿದ್ಯುತ್ ಹರಿದು ಬೇಲಿಗೆ ಹಾಕಿದ್ದ ತಂತಿಗೆ ತಗುಲಿತ್ತು. ಆಕಸ್ಮಿಕವಾಗಿ ತಂತಿಬೇಲಿಯನ್ನು ಮುಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ವಿದ್ಯುತ್ ತಂತಿಯು ಬೇಲಿಗೆ ತಗುಲಿರುವುದನ್ನು ಸರಿಪಡಿಸಲು ಮನೆಯ ಮಾಲಕ ಸಂದೀಪ್ ಪೆರೇರಾ ಅವರು ಮೆಸ್ಕಾಂ ಎಇಇ ಮತ್ತು ಸಇಬ್ಬಂದಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ವಿಮಲ ಪೆರೇರಾ ಮೃತಪಟ್ಟಿದ್ದಾರೆ ಎಂದು ಸಂದೀಪ್ ಪೆರೇರಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Next Story





