ಅಡುಗೆ ಅನಿಲ ಸೋರಿಕೆ: ಮಗು ಸೇರಿ ನಾಲ್ವರಿಗೆ ಗಾಯ
ಬೆಂಗಳೂರು, ಅ. 29: ಅಡುಗೆ ಅನಿಲ ಸೋರಿಕೆಯಿಂದ ಉಂಟಾದ ಆಕಸ್ಮಿಕ ಬೆಂಕಿ ಪರಿಣಾಮ ಮನೆಯಲ್ಲಿದ್ದ ನಾಲ್ಕು ಮಂದಿ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಲ್ಲಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ವೀರಸ್ವಾಮಿ ಲೇಔಟ್‌ನ ನರೇಂದ್ರ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಬೆಳಗ್ಗೆ 6.30ರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ನರೇಂದ್ರ ಮತ್ತು ಅವರ ಪತ್ನಿ, ಮಗು ಹಾಗೂ ಅವರ ಸಹೋದರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ತೀವ್ರವಾಗಿ ಗಾಯಗೊಂಡಿರುವ ನಾಲ್ಕು ಮಂದಿಯೂ ಪ್ರಾಣಾಪಾಯದಿಂದ ದೂರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕಾಡುಗೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
Next Story





