ರೈಲಿಗೆ ಸಿಲುಕಿ ಯುವಕ ಮೃತ್ಯು
ಬೆಂಗಳೂರು, ಅ. 29: ರೈಲಿಗೆ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.
ಘಟನೆಯಲ್ಲಿ ಮೃತಪಟ್ಟನ ಯುವಕನ ಹೆಸರು, ವಿಳಾಸ ಸೇರಿದಂತೆ ಆತನ ವೈಯಕ್ತಿಕ ವಿವರ ಸಧ್ಯಕ್ಕೆ ತಿಳಿದು ಬಂದಿಲ್ಲ.
ಇಲ್ಲಿನ ಕೊಡಿಗೆಹಳ್ಳಿ ಮತ್ತು ಯಲಹಂಕ ಮಧ್ಯೆ ಸಹಕಾರ ನಗರ ಸಮೀಪ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ. ಸುಮಾರು 30ರಿಂದ 35 ವರ್ಷದ ಯುವಕ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕೆಂಪು ಕಡುನೀಲಿ ಬಣ್ಣದ ಚೆಕ್ ಶರ್ಟ್ ಧರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಈ ಸಂಬಂಧ ಯಶವಂತಪುರ ರೈಲ್ವೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





