ಕಡಂದೇಲು ಪುರುಷೋತ್ತಮ ಭಟ್ ಶತಸ್ಮತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ, ಅ.29: ಪರ್ಯಾಯ ಪೇಜಾವರ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ತೆಂಕುತಿಟ್ಟಿನ ಸೀವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ ಕಟೀಲು ಅವರ ಶತಸ್ಮತಿ ಕಾರ್ಯಕ್ರಮ ‘ಮರ್ಯಾದಾ ಪುರು ಷೋತ್ತಮ’ವನ್ನು ಪರ್ಯಾಯ ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಹಿರಿಯ ಕಲಾ ತಪಸ್ವಿಗಳನ್ನು ಗುರುತಿಸಿ ಗೌರವಿಸುವುದರೊಂದಿಗೆ ಕಲಾ ಪೋಷಣೆಯ ಜತೆಗೆ ಕಲಾವಿದರ ಸ್ಥಾನಮಾನ ವನ್ನು ಹೆಚ್ಚಿಸಿದಂತಾಗುತ್ತದೆ. ಪುರುಷೋತ್ತಮ ರಂಗಸ್ಥಳದಲ್ಲಿ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದರು. ಅವರು ಇಲ್ಲದೇ ಹೋದರೂ ಅವರ ನೆನಪು ಮಾತ್ರ ಶಾಶ್ವತವಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಹಿರಿಯ ಕಲಾ ತಪಸ್ವಿಗಳನ್ನು ಗುರುತಿಸಿ ಗೌರವಿಸುವುದರೊಂದಿಗೆ ಕಲಾ ಪೋಷಣೆಯ ಜತೆಗೆ ಕಲಾವಿದರ ಸ್ಥಾನಮಾನ ವನ್ನು ಹೆಚ್ಚಿಸಿದಂತಾಗುತ್ತದೆ. ಪುರುಷೋತ್ತಮ ರಂಗಸ್ಥಳದಲ್ಲಿ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಸಾಮರ್ಥ್ಯ ಹೊಂದಿದ್ದರು. ಅವರು ಇಲ್ಲದೇ ಹೋದರೂ ಅವರ ನೆನಪು ಮಾತ್ರ ಶಾಶ್ವತವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರುಗಳಾದ ಕುಂಬ್ಳೆ ಸುಂದರ ರಾವ್, ಹಿರಿಯಡ್ಕ ಗೋಪಾಲ ರಾವ್, ಹೊಸ್ತೋಟ ಮಂಜುನಾಥ ಭಾಗವತ, ಪಾತಾಳ ವೆಂಕಟರಮಣ ಭಟ್, ಕೆ.ಗೋವಿಂದ ಭಟ್, ಬೇತ ಕುಂಞ ಕುಲಾಲ್, ಪುಂಡಾರೀಕಾಕ್ಷ ಉಪಾಧ್ಯ, ಪೆರುವೋಡಿ ನಾರಾಯಣ ಭಟ್, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಡಾ.ಶಿಮಂತೂರು ನಾರಾಯಣ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ, ರೆಂಜಾಳ ರಾಮಕೃಷ್ಣ ರಾವ್, ಮಾರ್ಗೋಳಿ ಗೋವಿಂದ ಶೇರಿಗಾರ್, ಸಂಪಾಜೆ ಶಿವಪ್ಪ ರೈ, ಎಂ.ಕೆ.ರಮೇಶ ಆಚಾರ್ಯ, ಪದ್ಯಾಣ ಶಂಕರನಾರಾಯಣ ಭಟ್, ಕುರರಿಯ ಗಣಪತಿ ಶಾಸಿ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳದ ವಾಸುದೇವ ಆಸ್ರಣ್ಣ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.







