ಇಂದೋರ್‌ನಲ್ಲಿ ಬೆಂಕಿ ದುರಂತ: 400 ವಾಹನ ಅಗ್ನಿಗಾಹುತಿ

ಇಂದೋರ್, ಅ.29: ಬಳಸಿದ ವಾಹನ (ಸೆಕೆಂಡ್ ಹ್ಯಾಂಡ್) ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 400 ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾದ ಘಟನೆ ಇಂದೋರ್‌ನಲ್ಲಿ ನಡೆದಿದೆ.
ಅಗ್ರಸೇನ್ ಚೌರಾಹ ಪ್ರದೇಶದಲ್ಲಿ ಘಟನೆ ನಡೆದಿದೆ. ಬಳಕೆಯಾದ ವಾಹನ ಮಾರಾಟ ಮಾಡುತ್ತಿದ್ದ ಈ ಅಂಗಡಿಗಳಲ್ಲಿ ಬಹುತೇಕ ದ್ವಿಚಕ್ರ ವಾಹನಗಳಿದ್ದವು. ಒಂದು ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಶೀಘ್ರ ಇತರ ಅಂಗಡಿಗೂ ಹಬ್ಬಿದೆ. ಪರಿಣಾಮ 400ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸುಟ್ಟು ಕರಕಲಾಗಿದೆ. ನಾಲ್ಕು ಅಗ್ನಿಶಾಮಕ ಯಂತ್ರಗಳು ಬೆಂಕಿ ನಂದಿಸಲು ಹಲವು ಗಂಟೆ ಶ್ರಮಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.
Next Story





