ಪೆರ್ಲಾಪು ಗ್ರಾಮೀಣ ರೋಟರಿ ಭವನದಲ್ಲಿ ರಕ್ತದಾನ ಶಿಬಿರ

ಬಂಟ್ವಾಳ, ಅ. 29: ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಸಮುದಾಯ ದಳ ಕಡೇಶಿವಾಲಯ, ಗೆಳೆಯರ ಬಳಗ ಆರಿಕಲ್ಲು, ಜಿ.ವಿ. ಫ್ರೆಂಡ್ಸ್ ಕಡೇಶಿವಾಲಯ, ಸತ್ಯ ದೇವತಾ ಗೆಳೆಯರ ಬಳಗ ಬೊಳ್ಳಾರು ಕಡೇಶಿವಾಲಯ, ಡಾ. ಬಿ.ಆರ್.ಅಂಬೇಡ್ಕರ್ ಸಮಾಜ ಸೇವಾ ಸಂಘ ಕಡೇಶಿವಾಲಯ, ಸೇವಾಂಜಲಿ ಪ್ರತಿಷ್ಟಾನ ಪರಂಗಿಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಪೆರ್ಲಾಪು ಗ್ರಾಮೀಣ ರೋಟರಿ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಕಡೇಶಿವಾಲಯ ಶ್ರೀಲಕ್ಮೀ ದೇವಸ್ಥಾನದ ವರಮಹಾಲಕ್ಮೀ ಸೇವಾ ಸಮಿತಿಯ ಅಧ್ಯಕ್ಷೆ ವನಿತಾ ಕೂಸಪ್ಪ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಸಿ.ಸಿ. ಕಮ್ಯುನಿಟಿಯ ನಿರ್ದೇಶಕ ರೋ ಸದಾಶಿವ ಬಾಳಿಗ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜಾ ಮಾತನಾಡಿ ರಕ್ತದಾನ ಮಾಡಿ ಜೀವ ಉಳಿಸುವುದು ಜೀವನದ ಶ್ರೇಷ್ಠ ದಾನ, ಗ್ರಾಮೀಣ ಪ್ರದೇಶದಲ್ಲಿ ರಕ್ತದಾನ ಮಾಡಲು ಯುವಕರಿಗೆ ಪ್ರೇರೆಣೆ ನೀಡುವ ಕೆಲಸವನ್ನು ಕಡೇಶಿವಾಲಯದ ರೋಟರಿ ಮಾಡಿದೆ ಎಂದರು.
ವೇದಿಕೆಯಲ್ಲಿ ಆರ್.ಸಿ.ಸಿ. ಸಾಜೆಂಟ್ ರೋ ಚಂದ್ರಹಾಸ ಗಾಂಬೀರ, ಸಮುದಾಯ ದಳದ ರೋಟರಿ ಸಲಹಾ ಸಮಿತಿಯ ಅಧ್ಯಕ್ಷ ಕೆ.ಕೆ.ಶೆಟ್ಟಿ,ಗೆಳೆಯರ ಬಳಗ ಆರಿಕಲ್ಲು ಇದರ ಅಧ್ಯಕ್ಷ ಹರಿಶ್ಚಂದ್ರ ಕಾಡಬೆಟ್ಟು,ಜಿ.ವಿ. ಫ್ರೆಂಡ್ಸ್ ಕಡೇಶಿವಾಲಯದ ಸಂಚಾಲಕ ಚಂದ್ರೋದಯ, ಸತ್ಯ ದೇವತಾ ಗೆಳೆಯರ ಬಳಗ ಬೊಳ್ಳಾರು ಇದರ ಅಧ್ಯಕ್ಷ ಧನರಾಜ್ ಬೋಳ್ಳಾರು. ಡಾಬಿ.ಆರ್.ಅಂಬೇಡ್ಕರ್ ಸಮಾಜ ಸೇವಾ ಸಂಘ ಕಡೇಶಿವಾಲಯದ ಅಧ್ಯಕ್ಷ ಜಯ ವಿ. ಉಪಸ್ಥಿತರಿದ್ದರು.
ಕಡೇಶಿವಾಲಯದ ರೋಟರಿ ಸಮುದಾಯದಳದ ಅಧ್ಯಕ್ಷ ಡಿ.ಸಂಜೀವ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಪ್ರದೀಪ್ ಕುಮಾರ್ ವಂದಿಸಿದರು.







