ಶತಸ್ಮತಿ ಸಮಾರೋಪ: ಕೃತಿ ಬಿಡುಗಡೆ, ಸ್ಮತಿ ಗೌರವ

ಉಡುಪಿ, ಅ.29: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ತೆಂಕುತಿಟ್ಟುವಿನ ಸುಪ್ರಸಿದ್ಧ ಸೀ ವೇಷಧಾರಿ ಕಡಂದೇಲು ಪುರುಷೋತ್ತಮ ಭಟ್ ಕಟೀಲು ಅವರ ಶತಸ್ಮತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರ ಕುರಿತ ‘ಮರ್ಯಾದಾ ಪುರುಷೋತ್ತಮ’ ಕೃತಿಯನ್ನು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಬಳಿಕ ಆಶೀರ್ವಚನ ನೀಡಿದ ಪೇಜಾವರ ಶ್ರೀ, 9ವರ್ಷ ವಯಸ್ಸಿನಲ್ಲಿ ಪೇಜಾವರ ಮಠದಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಪುರುಷೋತ್ತಮ ಭಟ್ ಅವರ ಕೈಕೆ ಹಾಗೂ ದ್ರೌಪದಿಯ ಪಾತ್ರವನ್ನು ನೋಡಿದ್ದೆ. ಆ ಪಾತ್ರಗಳು ಈಗಲೂ ಮರೆಯಲು ಆಗುವುದಿಲ್ಲ. ಅವರ ಪಾತ್ರ, ಅಭಿನಯ, ಮಾತು ಗಾರಿಕೆ ಬಹಳ ಆಕಷರ್ಣಿವಾದುದು ಎಂದು ಹೇಳಿದರು.
ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಸಂಸ್ಮರಣ ಭಾಷಣ ಮಾಡಿ, ಇಂದು ಯಕ್ಷಗಾನ ದ್ವಿಮುಖ ಚಲನೆಗೆ ಒಳಗಾಗಿದೆ. ಒಂದು ಕಡೆ ಯಕ್ಷಗಾನ ಉತೃಷ್ಕದಲ್ಲಿ ಇದ್ದರೆ ಇನ್ನೊಂದು ಕಡೆ ಯಕ್ಷಗಾನವನ್ನು ಕೇವಲ ನೃತ್ಯಕ್ಕೆ ಸೀಮಿತಗೊಳಿಸಲಾಗುತ್ತಿದೆ. ಯಕ್ಷಗಾನದ ದುರ್ಬಳಕೆ ಆಗಬಾರದು. ಅದರ ಗೌರವ ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೋಪಾಕೃಷ್ಣ ಅಸ್ರಣ್ಣ, ಹಿರಿಯ ಯಕ್ಷಗಾನ ಕಲಾವಿದರು ಗಳಾದ ಬಲಿಪ ನಾರಾಯಣ ಭಾಗವತ, ಕುದ್ರೆಗೋಡ್ಲು ರಾಮ ಭಟ್, ಪಡ್ರೆ ಚಂದು, ಕಲ್ಲಾಡಿ ಕೊರಗ ಶೆಟ್ಟಿ, ಪಡ್ರೆ ಶ್ರೀಪತಿ ಶಾಸ್ತ್ರಿ, ಅಳಕೆ ರಾಮ ರೈ ಅವರಿಗೆ ಸ್ಮತಿ ಗೌರವ ಸಲ್ಲಿಸಲಾಯಿತು. ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಶ್ರೀರಾಮ ವಿಠಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಕಲಾವಿದರ ಕುಟುಂಬಗಳಿಗೆ ಗುಂಪು ವಿಮೆ ಹಾಗೂ ಮೆಡಿಕ್ಲೈಂ ಮೊತ್ತವನ್ನು ಹಸ್ತಾಂತರಿಸಲಾಯಿತು.
ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ, ಕೆ.ಸದಾಶಿವ ಭಟ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯ ದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಎನ್. ಶೃಂಗೇಶ್ವರ ವಂದಿಸಿದರು. ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಸಹಯೋಗ ದಲ್ಲಿ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ಪ್ರದರ್ಶನ ಜರಗಿತು.







