ಫ್ರೆಂಚ್ ಓಪನ್: ಪ್ರಶಸ್ತಿ ಮುಡಿಗೇರಿಸಿದ ಕೆ. ಶ್ರೀಕಾಂತ್
2017ರಲ್ಲಿ ನಾಲ್ಕನೆ ಸೂಪರ್ ಸಿರೀಸ್ ಪ್ರಶಸ್ತಿ

ಪ್ಯಾರಿಸ್, ಅ.29: ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ಭಾರತದ ಕೆ.ಶ್ರೀಕಾಂತ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ರವಿವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಅವರು ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು 21-14, 21-13 ನೇರ ಸೆಟ್‌ಗಳಿಂದ ಮಣಿಸಿ ಎರಡು ವಾರಗಳ ಅವಧಿಯಲ್ಲಿ ಎರಡನೆ ಸೂಪರ್ ಸಿರೀಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಶ್ರೀಕಾಂತ್ ಮತ್ತು ನಿಶಿಮೊಟೊ ಅವರ ನಡುವಿನ ಫೈನಲ್ ಪಂದ್ಯ ಕೇವಲ 35 ನಿಮಿಷಗಳಲ್ಲಿ ಕೊನೆಗೊಂಡಿತು. 2017ರಲ್ಲಿ 4ನೆ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದುಕೊಂಡಿರುವ ಶ್ರೀಕಾಂತ್ ವೃತ್ತಿ ಬದುಕಿನಲ್ಲಿ ಜಯಿಸಿರುವ ಪ್ರಶಸ್ತಿಗಳ ಸಂಖ್ಯೆಯನ್ನು 6ಕ್ಕೆ ಏರಿಸಿದ್ದಾರೆ.
Next Story





