ಗಾಂಜಾ ಸೇವನೆ: 7 ಮಂದಿ ಆರೋಪಿಗಳ ಬಂಧನ

ಮಂಗಳೂರು, ಅ. 29: ನಗರದ ಕೊಟ್ಟಾರ ಚೌಕಿ, ಕುಂಟಿಕಾನ ಹಾಗೂ ಕೋಡಿಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ 7 ಮಂದಿಯನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಹಾಗೂ ಉರ್ವ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕುಂಟಿಕಾನದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವೆಲೆನ್ಸಿಯಾ ನಿವಾಸಿ ಮುಹಮ್ಮದ್ ರಮ್ಲಾನ್ (22), ಮಾರ್ನಮಿಕಟ್ಟೆ ನಿವಾಸಿ ಅಂಕಿತ್ ಶೆಟ್ಟಿ (25), ಕೊಟ್ಟಾರ ಚೌಕಿ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಕದ್ರಿ ನಿವಾಸಿಗಳಾದ ಶುಭಂ (23), ಶಾನ್ ರೋಡ್ರಿಗಸ್, ಜೆಪ್ಪು ನಿವಾಸಿ ಗಣೇಶ್ ಪೂಜಾರಿ (24) ಹಾಗೂ ಕೋಡಿಕ್ಕಲ್ ಮೈದಾನದ ಬಳಿಯಿಂದ ಸ್ಥಳೀಯ ನಿವಾಸಿಗಳಾದ ಪ್ರವೀಣ್ (25), ರಂಜಿತ್ ದೇವಾಡಿಗ (21) ಅವರನ್ನು ರವಿವಾರ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಹಾಗೂ ಕೇಂದ್ರ ಉಪವಿಭಾಗ ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹದಳದ ಪೊಲೀಸ್ ನಿರೀಕ್ಷಕ ರವೀಶ್ ಎಸ್. ನಾಯಕ್, ಪಿಎಸ್‌ಐ ಕೃಷ್ಣ ಬಿ., ಎಎಸ್‌ಐಗಳಾದ ದಾಮೋದರ್, ಬಾಲಕೃಷ್ಣ, ಎಚ್‌ಸಿಗಳಾದ ಸಂತೋಷ್ ಕುಮಾರ್ ಸಸಿಹಿತ್ಲು, ಸಿದ್ಧಾರ್ಥ್, ಸಂತೋಷ್ ಕುಮಾರ್, ಕರುಣೇಶ್ ಕುಮಾರ್, ಲೋಕೇಶ್, ಪಿಸಿಗಳಾದ ಪ್ರಮೋದ್, ವಿನೋದ್, ಯೋಗೀಶ್, ಕಾಂತರಾಜು, ಹೇಮಂತ್ ಕುಮಾರ್, ಶಂಕರಪ್ಪ ಲಮಾಣಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







