ಜಾನುವಾರು ಕಳವಿಗೆ ಯತ್ನ: ಓರ್ವನ ಸೆರೆ
ಬೈಂದೂರು, ಅ.29: ಕಾಲ್ತೋಡು ಗ್ರಾಮದ ಕಬ್ಸೆ ಎಂಬಲ್ಲಿ ಶಾಲೆ ಬಳಿ ಅ.28ರಂದು ರಾತ್ರಿ 11ಗಂಟೆ ಸುಮಾರಿಗೆ ಓಮಿನಿ ಕಾರು ಹಾಗೂ ಸ್ಕೂಟರ್ ನಲ್ಲಿ ಜಾನುವಾರು ಕಳವು ಮಾಡಲು ಪ್ರಯತ್ನಿಸುತ್ತಿದ್ದ ಒಬ್ಬನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಜಾನುವಾರು ಕಳವು ಮಾಡುತ್ತಿರುವ ಕುರಿತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದಾಗ ಅವರಲ್ಲಿ ಮೂವರು ಪರಾರಿಯಾಗಿದ್ದು, ಓರ್ವ ನನ್ನು ಪೊಲೀಸರು ಬಂಧಿಸಿದ್ದಾರೆ.
ಅವರು ಕಳ್ಳತನ ಮಾಡಲು ಬಳಸಿದ ಓಮಿನಿ ಕಾರು ಹಾಗೂ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





