ವನ್ನಿಕುಲ ಕ್ಷತ್ರಿಯ ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನಿಡಬೇಕು: ಧ್ರುವನಾರಾಯಣ್

ಹನೂರು, ಅ.29: ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರವು ಉತ್ತಮ ಆಡಳಿತ ನೀಡಿದ್ದು, ದೇಶದಲ್ಲಿಯೇ ಕರ್ನಾಟಕ ನಂ.1 ಮುಖ್ಯ ಮಂತ್ರಿಯೆಂದು ಗೌರವ ಸಿಕ್ಕಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದ್ದಾರೆ.
ಕ್ಷೇತ್ರ ವ್ಯಾಪ್ತಿಯ ಅಜ್ಜಿಪುರ ಹಾಗೂ ಕಾಂಚಳ್ಳಿಯಲ್ಲಿ ಗ್ರಾಮದಲ್ಲಿ ವನ್ನಿಕುಲ ಕ್ಷತ್ರಿಯ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇನ್ನಿತರ ಒಳ್ಳೆಯ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಬೇಕು. ಈ ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತರಬೇಕು ಎಂದು ತಿಳಿಸಿದರು.
ಯಡಿಯೂರಪ್ಪನವರು ಮುಖ್ಯ ಮಂತ್ರಿಯಾದ ಸಂದರ್ಭದಲ್ಲಿ ಹನೂರು ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಥದ ಕಡೆ ಕೂಂಡಯ್ಯಲು ಹಲವಾರು ಯೋಜನೆಗಳನ್ನು ರೊಪಿಸಿದರು. ಆದರೂ ಸರಿಯಾದ ಸ್ಪಂದನೆ ಸಿಕ್ಕರಲಿಲ್ಲ. ಬಳಿಕ 2013ರ ಚುನಾವಣೆಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯನ ಸರ್ಕಾರ ಆಡಳಿತ ವಹಿಸಿಕೂಂಡ ಮೇಲೆ ಹನೂರು ಕ್ಷೇತ್ರದಲ್ಲಿ ಸುಮಾರು 2500 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಬಸವರಾಜು, ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಗುರುಮಲ್ಲಪ್ಪ, ಮಾಜಿ ಜಿಪಂ ಸದಸ್ಯ ಈಶ್ವರ್, ದೇವರಾಜು, ತಾ.ಪಂ ಅಧ್ಯಕ್ಷ ರಾಜು, ತಾ.ಪಂ ಸದಸ್ಯರಾದ ರಾಮಾಪುರ ರಾಜೇಂದ್ರ, ನಟರಾಜು, ಗ್ರಾ.ಪಂ ಅಧ್ಯಕ್ಷ ಸುದಾಮಣಿ, ಎಸ್.ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ,ಲೋಕೇಶ್, ಮುಖಂಡರಾದ ಪುಟ್ಟರಾಜು, ಮುರುಳಿ, ಉದ್ದನೂರು ಸಿದ್ದರಾಜು,ಸಿ.ಕೆ.ಕೃಷ್ಣ ಕುಮಾರ್.ಹನೂರು ಪ.ಪಂ ಸದಸ್ಯ ನಾಗಣ್ಣ ಹಾಗೂ ಇನ್ನಿತರರು ಹಾಜರಿದ್ದರು.







