ಆಸ್ಟ್ರೇಲಿಯ: ಒಂದೇ ದಿನದಲ್ಲಿ ಎಷ್ಟು ಲಕ್ಷ ಸಿಡಿಲುಗಳು ಅಪ್ಪಳಿಸಿವೆ ಗೊತ್ತೇ?
ಬ್ರಿಸ್ಬೇನ್ (ಆಸ್ಟ್ರೇಲಿಯ), ಅ. 30: ಆಸ್ಟ್ರೇಲಿಯದ ಕ್ವೀನ್ಸ್ಲ್ಯಾಂಡ್ ರಾಜ್ಯದಲ್ಲಿ ರವಿವಾರ ಬೀಸಿದ ಬಿರುಗಾಳಿಯ ವೇಳೆ 1,76,000 ಬಾರಿ ಸಿಡಿಲು ಬಡಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರವಿವಾರ ರಾತ್ರಿಯ ಆಕಾಶದಲ್ಲಿ ಸಿಡಿಲು ಮತ್ತು ಮಿಂಚು ತಾಂಡವವಾಡಿದವು ಹಾಗೂ ಸೋಮವಾರ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಬಿರುಗಾಳಿಯಿಂದಾಗಿ 4,000ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸರಬರಾಜು ಕಡಿತಗೊಂಡಿತ್ತು ಎಂದು ಸ್ಥಳೀಯ ವಿದ್ಯುತ್ ಪೂರೈಕೆ ಕಂಪೆನಿ ಎನರ್ಜೆಕ್ಸ್ ಹೇಳಿದೆ.
Next Story