ನಗದು ರಹಿತ ವ್ಯವಹಾರ ಕುರಿತು ಉಪನ್ಯಾಸ

ಉಡುಪಿ, ಅ.30: ನಗದು ರಹಿತ ವ್ಯವಹಾರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಜರಗಿತು.
ಅತಿಥಿ ಉಪನ್ಯಾಸಕ ಪ್ರೊ.ನಾಗರಾಜ ಯು. ನಗದು ರಹಿತ ವ್ಯವಹಾರ ದಿಂದ ಹೇಗೆ ನಮ್ಮ ದೇಶದಲ್ಲಿನ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸ ಬಹುದು ಮತ್ತು ಇದರಿಂದ ನಮ್ಮ ದೇಶಕ್ಕೆ ಆಗುವಂತಹ ಲಾಭಗಳೇನು ಎನ್ನುವುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿ ದ್ದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕ ಗಣೇಶ್ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿ ವರುಣ್ ಕಾರ್ಯಕ್ರಮ ನಿರೂಪಿಸಿದರು.
Next Story





