ಅಂತರ್-ತರಗತಿ ಸ್ಪರ್ಧೆ ‘ಪ್ರತಿಭೋತ್ಸವ’

ಉಡುಪಿ, ಅ.30: ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಅಂತರ್-ತರಗತಿ ಸ್ಪರ್ಧೆ ಪ್ರತಿಭೋತ್ಸವ ಜರಗಿತು. ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಅತಿ ವಂ. ಸ್ಟ್ಯಾನಿ ಬಿ. ಲೋಬೋ ವಹಿಸಿದ್ದರು.
ಎರಡು ದಿನಗಳ ಕಾಲ ಮಕ್ಕಳು ರಸಪ್ರಶ್ನೆ, ಆಶು ಭಾಷಣ, ಮೂಕಾಭಿನಯ, ಏಕಪಾತ್ರಭಿನಯ, ಕಥೆ ಬರೆಯುವುದು, ಮಿಮಿಕ್ರಿ, ಕೊಲಾಜ್, ಬೆಂಕಿ ಇಲ್ಲದ ಅಡಿಗೆ, ಬರವಣಿಗೆ, ಹಾಡು, ನೃತ್ಯ, ತಿರುಗಿ ಮಾತನಾಡು, ಹಾಸ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪೌಲ್ ಲೋಬೋ ವಿಜೇತ ರಿಗೆ ಬಹುಮಾನಗಳನ್ನು ವಿತರಿಸಿದರು. ಶಾಲೆಯ 10ನೆ ಎ ತರಗತಿ ಸಮಗ್ರ ಪ್ರಶಸ್ತಿ, 9ನೆ ಬಿ ತರಗತಿ ದ್ವಿತೀಯ ಸ್ಥಾನ ಪಡೆಯಿತು. ಶಾಲಾ ಮುಖ್ಯೋಪಾ ಧ್ಯಾಯ ರೆ.ಫಾ.ಲ್ಯಾನ್ಸಿ ಫೆರ್ನಾಂಡಿಸ್ ಎಸ್.ಜೆ, ಸಹಶಿಕ್ಷಕಿ ಮಾರಿಯೆಟ್ ಸಿಕ್ವೇರಾ ಉಪಸ್ಥಿತರಿದ್ದರು.
Next Story





