ನ.4: ನೆಕ್ಕಿಲ್‌ನಲ್ಲಿ ಜಲಾಲಿಯ್ಯ ವಾರ್ಷಿಕ
ಕುಪ್ಪೆಟ್ಟಿ, ಅ.30: ಎಸ್ಸೆಸ್ಸೆಫ್ ನೆಕ್ಕಿಲ್ ಶಾಖೆಯ 7ನೆ ಜಲಾಲಿಯ್ಯ ವಾರ್ಷಿಕ ಹಾಗೂ ಸುನ್ನಿ ಸಮಾವೇಶವು ನ. 4ರಂದು ಸಂಜೆ 6ಕ್ಕೆ ನಡೆಯಲಿದೆ. ಅಸೈಯದ್ ಕೆ.ಎಸ್ ಮುಕ್ತಾರ್ ತಂಙಳ್ ಕುಂಬೋಳ್ ನೇತೃತ್ವ ಹಾಗೂ ಅಸೈಯದ್ ಹಬೀಬುಲ್ಲಾಹ್ ಮದನಿ ಪೋಕೋಯ ತಂಙಳ್ ಕುಪ್ಪಟ್ಟಿ ಆಶೀರ್ವಚನ ನೀಡಲಿದ್ದಾರೆ.
ಯುವ ಭಾಷಣಗಾರ ಹಂಝ ಮಿಸ್ಬಾ ಓಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಪದ್ಮುಂಜ ಖತೀಬ್ ಮಸೂದ್ ಸಅದಿ ಜಲಾಲಿಯ ಆಲಾಪಣೆ ಮಾಡಲಿದ್ದಾರೆ. ಎಸ್ಸೆಸ್ಸೆಫ್ ಶಾಖಾಧ್ಯಕ್ಷ ಹನೀಫ್ ಮದನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕ ನಝೀರ್ ನೆಕ್ಕಿಲ್ ತಿಳಿಸಿದ್ದಾರೆ.
Next Story





