ಗಾಂಜಾ ಬೆಳೆ: ರೈತನಿಗೆ ಜೈಲು
ಶಿವಮೊಗ್ಗ, ಅ.30: ಜಮೀನಿನಲ್ಲಿ ಕಾನೂನುಬಾಹಿರವಾಗಿ ಗಾಂಜಾ ಬೆಳೆದಿದ್ದ ರೈತರೊಬ್ಬರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಸಾಗರದ ದೊಡ್ಡೇರಿ ಕನ್ನಪ್ಪಶಿಕ್ಷೆಗೆ ಗುರಿಯಾದ ರೈತರಾಗಿದ್ದಾರೆ.
ಅ. 2015ರಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಬಿಳಿಸಿರಿ ಗ್ರಾಮದಲ್ಲಿ ಕನ್ನಪ್ಪತನ್ನ ಜಮೀನಿನಲ್ಲಿ ಬೆಳೆದಿದ್ದ 46ಸಾವಿರ ರೂ.ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಈ ಸಂಬಂಧ ಕೇಸು ದಾಖಲಿಸಿದ್ದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕನ್ನಪ್ಪನಿಗೆ 3 ವರ್ಷ ಜೈಲು ಶಿಕ್ಷೆ, 15 ಸಾವಿರ ರೂ. ದಂಡವಿಧಿಸಿ ನ್ಯಾಯ ಮೂರ್ತಿ ಆರ್.ಬಿ ಧರ್ಮಗೌಡರ್ ಅವರು ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವಿ.ಜಿ ಯಳಗೇರಿ ಅವರು ವಾದಿಸಿದ್ದರು.
Next Story





