ಶಿವಮೊಗ್ಗ: ಗುಂಡಿ ಮುಚ್ಚಲು ಎಬಿವಿಪಿ ಆಗ್ರಹ
ಶಿವಮೊಗ್ಗ, ಅ.30: ಸವಳಂಗ ರಸ್ತೆಯಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜೆಎನ್‌ಎನ್‌ಸಿಇ ಎದುರು ಧರಣಿ ನಡೆಸಿದರು.
ಸವಳಂಗ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಅಪಘಾತದಲ್ಲಿ ವಿನಯ್‌ಕುಮಾರ್ ಎಂಬವರು ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಗೆ ಬಳಸಲು ರಸ್ತೆಯಲ್ಲೇ ಹಾಕಲಾಗಿದ್ದ ಜಲ್ಲಿ ಮತ್ತು ಮರಳಿನ ರಾಶಿಯಿಂದ ಅಪಘಾತ ಸಂಭವಿಸಿದೆ ಎಂದು ದೂರಿದರು.
ಅಪಘಾತಕ್ಕೆ ಗುತ್ತಿಗೆದಾರರು ಹೊಣೆಗಾರರಾಗಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜೆಎನ್‌ಎನ್‌ಸಿಇ ವಲಯದಲ್ಲಿ ವಾಹನಗಳ ವೇಗ ತಗ್ಗಿಸಲು ಬ್ಯಾರಿಕೇಡ್ ಅಥವಾ ಹಂಪ್ಸ್ ಅಳವಡಿಸಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಪ್ರಮುಖರಾದ ಸಚಿನ್ ರಾಯ್ಕರ್, ಅಭಿಷೇಕ್, ಶರತ್, ಪವನ್, ಜಾಧವ್, ನಿರಂಜನ್, ಕಾರ್ತಿಕ್, ಸಂದೀಪ್, ಪ್ರಧಾನ್ ಮತ್ತಿತರರಿದ್ದರು.
Next Story





