ಸಹನಾ ಕುಮಾರಿಗೆ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು, ಅ.30: ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮೂಲತಃ ಮಂಗಳೂರಿನ ಕೋಟೆಕಾರ್‌ನ ಅಥ್ಲೀಟ್ ಸಹನಾ ಕುಮಾರಿ 2017ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. 35ರ ಹರೆಯದ ಸಹನಾ ಕುಮಾರಿ ಹೈದರಾಬಾದ್‌ನಲ್ಲಿ 2012ರಲ್ಲಿ ಎತ್ತರ ಜಿಗಿತದಲ್ಲಿ 1.92 ಮೀ. ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಹಂತಕ್ಕೆ ತಲುಪಲು 1.85 ಮೀಟರ್ ಸಾಧನೆ ಮಾಡಬೇಕಿತ್ತು. ಆದರೆ ಸಹನಾ ಕುಮಾರಿ ಅರ್ಹತಾ ಸುತ್ತಿನಲ್ಲಿ 1.80 ಮೀಟರ್ ಎತ್ತರಕ್ಕೆ ಜಿಗಿದು 29ನೆ ಸ್ಥಾನ ಗಳಿಸಿದ್ದರು. ಇದರಿಂದಾಗಿ ಸಹನಾಗೆ ಅಂತಿಮ ಹಂತಕ್ಕೆ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ.
Next Story





