ಎಸ್.ಎಂ.ರಶೀದ್ ಹಾಜಿ ಅವರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು, ಅ.31: ಉದ್ಯಮಿ, ಸಮಾಜ ಸೇವಕ ಎಸ್.ಎಂ. ರಶೀದ್ ಹಾಜಿ ಅವರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ದ.ಕ. ಮುಸ್ಲಿಂ ಅಸೋಸಿಯೇಶನ್ ಹಾಗು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ಸ್ಥಾಪಕಾಧ್ಯಕ್ಷರಾಗಿ, 'ನಂಡೆ ಪೆಂಙಳ್' ಅಭಿಯಾನದ ಸಲಹೆಗಾರರಾಗಿ, ಮೆಲ್ಕಾರ್ ವಿಮೆನ್ಸ್ ಕಾಲೇಜಿನ ಅಧ್ಯಕ್ಷರಾಗಿ, ಚೆಂಬುಗುಡ್ಡೆಯ ಖೈರಿಯಾ ಟ್ರಸ್ಟ್ ಅಧ್ಯಕ್ಷರಾಗಿ, ಪಂಪ್‌ವೆಲ್‌ನ ತಖ್ವಾ ಜುಮಾ ಮಸೀದಿಯ ಮುತವಲ್ಲಿ ಹಾಗೂ ಮಂಗಳೂರು ಕೇಂದ್ರ ಜುಮಾ ಮಸೀದಿ-ಝೀನತ್ ಬಕ್ಷ್‌ನ ಸದಸ್ಯರಾಗಿ ರಶೀದ್ ಹಾಜಿ ಸೇವೆ ಸಲ್ಲಿಸುತ್ತಿದ್ದಾರೆ.
ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ. ರಶೀದ್ ಹಾಜಿ, ಮಂಗಳೂರು ಹಜ್ ಕೇಂದ್ರದಲ್ಲಿ ಹಜ್ ಯಾತ್ರೆಯ ಸಂದರ್ಭ ಸಕ್ರಿಯವಾಗಿ ತೊಡಗಿಸಿಕೊಂಡವರು. ಸಮಾಜ ಸೇವೆಯೊಂದಿಗೆ ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ಹಾಜಿ ಎಸ್.ಎಂ.ರಶೀದ್ ಸೇವೆ ಸಲ್ಲಿಸುತ್ತಿದ್ದಾರೆ.
Next Story





