‘ಫೋನ್‌ಪೇ ಪಿಒಎಸ್’ ಸಣ್ಣ ವ್ಯಾಪಾರಿಗೆ ಅನುಕೂಲ: ಸಮೀರ್
ಬೆಂಗಳೂರು, ಅ.31: ಸಣ್ಣ ವ್ಯಾಪಾರಿಗಳ ಅಗತ್ಯತೆಯನ್ನು ಪೂರೈಸುವ ಅತ್ಯಂತ ಅಗ್ಗದ, ಸುಲಭವಾಗಿ ಬಳಸ ಬಲ್ಲ ಮತ್ತು ಅತ್ಯಂತ ಬಾಳಿಕೆ ಬರುವ ‘ಫೋನ್‌ಪೇ ಪಿಒಎಸ್’ ಸಾಧನವಾಗಿದೆ ಎಂದು ಸಿಇಒ ಸಮೀರ್ ನಿಗಮ್ ಇಂದಿಲ್ಲಿ ವಿವರ ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಅವರು, ಭಾರತದಲ್ಲಿರುವ ಲಕ್ಷಾಂತರ ಸ್ಥಳೀಯ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಡಿಜಿಟಲ್ ಪಾವತಿಯ ಕಡೆಗೆ ಬಹುವೇಗದಲ್ಲಿ ಕರೆದೊಯ್ಯುವಲ್ಲಿ ಸಹಾಯ ಮಾಡಲಿದೆ. ಮಾರುಕಟ್ಟೆಗೆ ಇದನ್ನು ಬಿಡುಗಡೆ ವೇಳೆ ನಾವು ಇದನ್ನು ವ್ಯಾಪಾರಿಗಳಿಗೆ ಅತ್ಯಲ್ಪ ಸುರಕ್ಷತಾ ಠೇವಣಿಯ ಹೊರತಾಗಿ ಉಚಿತವಾಗಿಯೇ ನೀಡುತ್ತಿದ್ದೇವೆ ಎಂದರು.
ದೇಶದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಇಂತಹ ಪಿಒಎಸ್ ಸಾಧನ ಇದೇ ಮೊದಲ ಬಾರಿಗೆ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ಸ್ಥಳೀಯ ಅಂಗಡಿಗಳಲ್ಲಿ ಈ ಸಾಧನವು ಸಾಂಪ್ರದಾಯಿಕ ಕ್ಯಾಲ್ಕುಲೇಟರ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಬ್ಲ್ಯೂಟೂಥ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ ಎಂದು ಹೇಳಿದರು.
Next Story





