14ನೆ ವಿಶ್ವ ಕನ್ನಡ ಸಮ್ಮೇಳನ ಅಧ್ಯಕ್ಷರಾಗಿ ಡಾ.ನಟರಾಜ್ ಆಯ್ಕೆ

ಬೆಂಗಳೂರು, ಅ.31: ವಿಜ್ಞಾನಿ ಮತ್ತು ಸಾಹಿತಿ ಡಾ.ಇಂ.ಮೈ.ನಟರಾಜ್ ಅವರನ್ನು ಕನ್ನಡ ಕಸ್ತೂರಿ ಟೊರೊಂಟೊ, ಬಿ.ವಿ.ಕಮ್ಯುನಿಕೇಷನ್ ಇಂಕ್ ಇಂಡಿಯಾ ಹಾಗೂ ಹೃದಯ ವಾಹಿನಿ ಸಂಸ್ಥೆಗಳ ಜಂಟಿಯಾಗಿ ನ.10 ಮತ್ತು 11 ರಂದು ಅಮೆರಿಕದ ಟೊರೊಂಟೊದಲ್ಲಿ ಆಯೋಜಿಸಿರುವ 14ನೆ ವಿಶ್ವ ಕನ್ನಡ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ್ನು ಅನಿವಾಸಿ ಕನ್ನಡಿಗರ ಮತ್ತು ಹೊಸ ತಲೆಮಾರಿನ ಜನರಲ್ಲಿ ಉಳಿಸಿ-ಬೆಳೆಸುವ ಉದ್ದೇಶದಿಂದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕಳೆದ 13 ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿದೆ. ಈ ಸಮ್ಮೇಳನದಲ್ಲಿ ವಿವಿಧ ಕವಿಗೋಷ್ಠಿ, ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
Next Story





