ಶತಮಾನಗಳಿಂದ ಶೋಷಿತರಾಗಿಯೇ ಉಳಿದವರಿಗೆ ಮೀಸಲಾತಿ ಅಗತ್ಯ
ಕೇಂದ್ರ ಸಚಿವೆ ಉಮಾ ಭಾರತಿ

ಭೋಪಾಲ,ಅ.31: ಶತಮಾನಗಳಿಂದಲೂ ಶೋಷಿತರಾಗಿಯೇ ಉಳಿದಿರುವವರ ಲಾಭಕ್ಕಾಗಿ ಈ ದೇಶದಲ್ಲಿ ಮೀಸಲಾತಿಯು ಅಗತ್ಯವಾಗಿದೆ ಮತ್ತು ಅದು ಮುಂದುವರಿ ಯಬೇಕು ಎಂದು ಕೇಂದ್ರ ಸಚಿವೆ ಉಮಾ ಭಾರತಿ ಅವರು ಮಂಗಳವಾರ ಇಲ್ಲಿ ಹೇಳಿದರು.
ಧರ್ಮದ ಹೆಸರಿನಲ್ಲಿ ದೇಶದಲ್ಲಿ ಯಾವುದೇ ತಾರತಮ್ಯಗಳಿಲ್ಲ, ಆದರೆ ಜಾತಿಯ ಹೆಸರಿನಲ್ಲಿ ಇಂತಹ ತಾರತಮ್ಯಗಳು ಖಂಡಿತವಾಗಿಯೂ ಇವೆ ಎಂದು ಇಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಮೀಸಲಾತಿಯು ಸಂವಿಧಾನ ನೀಡಿರುವ ಸೌಲಭ್ಯವಾಗಿದೆ. ಆದ್ದರಿಂದ ಅದು ಮುಂದುವರಿಯಬೇಕು ಎಂದರು.
ಕೆಲವು ದೇವಸ್ಥಾನಗಳಲ್ಲಿ ಜಾತಿಯ ಆಧಾರದಲ್ಲಿ ನಿರ್ದಿಷ್ಟ ಜನರ ಪ್ರವೇಶವನ್ನು ನಿಷೇಧಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಉಮಾ ಭಾರತಿ, ಜನರು ತಮ್ಮ ಜಾತಿಯನ್ನು ಬಹಿರಂಗಗೊಳಿಸದೆ ದೇವಸ್ಥಾನಗಳಿಗೆ ಹೋಗಬೇಕು ಎಂದು ಹೇಳಿದರು.
Next Story





