ಪ್ಲಾಸ್ಟಿಕ್ ಸರ್ಜರಿ ಮೂಲ ಭಾರತ: ದಿಲ್ಲಿ ವಿ.ವಿ. ಮಾಜಿ ಉಪ ಕುಲಪತಿ

ಹೊಸದಿಲ್ಲಿ, ಅ. 31: ಏಸು ಕ್ರಿಸ್ತ ಹುಟ್ಟುವುದಕ್ಕಿಂತ ತುಂಬಾ ಹಿಂದೆ ಭಾರತದಲ್ಲಿ ಎರಡು ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಸಂಶೋಧಿಸಲಾಗಿತ್ತು ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ದಿನೇಶ್ ಸಿಂಗ್ ಹೇಳಿದ್ದಾರೆ.
ಇಲ್ಲಿನ ಆಚಾರ್ಯ ನರೇಂದ್ರ ದೇವ್ ಸ್ಮಾರಕ ಉಪನ್ಯಾಸ ನೀಡಿದ ಅವರು, ಪ್ಲಾಸ್ಟಿಕ್ ಸರ್ಜರಿ ಹಾಗೂ ಕ್ಯಾಟರ್ಯಾಕ್ಟ್ ಸರ್ಜರಿಯನ್ನು ಭಾರತದಲ್ಲಿ ಸಂಶೋಧಿಸಲಾಯಿತು ಎಂದಿದ್ದಾರೆ.
ಜಗತ್ತು ಭಾರತದ ಕಲಿಯಬೇಕಾಗಿರುವುದು ಸಾಕಷ್ಟಿದೆ. ರಶ್ಯಾದ ಇತಿಹಾಸಕಾರರೋರ್ವರು ನನಗೆ ಪ್ರಾಚೀನ ಸತ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Next Story





