ಕೊಂಕಣ್ ರೈಲ್ವೆ: ನ.1 ರಿಂದ ವೇಳಾಪಟ್ಟಿ ಬದಲು
ಉಡುಪಿ, ಅ.31: ಕೊಂಕಣ್ ರೈಲ್ವೆಯಲ್ಲಿ ಚಲಿಸುವ ರೈಲುಗಳು ಕಳೆದ ಜೂ.10ರಿಂದ ಮಳೆಗಾಲದ ನಿಧಾನಗತಿಯ ಸಮಯದಲ್ಲಿ ಚಲಿಸುತಿದ್ದು, ಅದು ಇಂದಿಗೆ ಮುಕ್ತಾಯಗೊಂಡಿದೆ. ನ.1ರಿಂದ ಎಲ್ಲಾ ರೈಲುಗಳು ಸಾಮಾನ್ಯ ವೇಳಾಪಟ್ಟಿಯಂತೆ ಚಲಿಸಲಿದ್ದು ಮಂಗಳೂರು- ಮುಂಬೈ 2 ರೈಲುಗಳ ಚಲನ ಸಮಯ ಈ ಕೆಳಗಿನಂತಿವೆ.
1.ನಂ 12620/12619 ಮತ್ಸ್ಯಗಂಧ ಮಂಗಳೂರು ಸೆಂಟ್ರಲ್‌ನಿಂದ ಅಪರಾಹ್ನ 2:55ಕ್ಕೆ ಹೊರಟು ಮರುದಿನ ಬೆಳಿಗ್ಗೆ 5:35ಕ್ಕೆ ಕುರ್ಲಾ ತಲುಪಲಿದೆ ಮತ್ತು ಅಪರಾಹ್ನ 3:20ಕ್ಕೆ ಕುರ್ಲದಿಂದ ಹೊರಟು ಮರುದಿನ ಬೆಳಿಗ್ಗೆ 7:30ಕ್ಕೆ ವುಂಗಳೂರು ತಲುಪಲಿದೆ.
2.ನಂ 12134/12133 ಸಿಎಸ್ಟಿಎಮ್ ಸೂಪರ್ ಫಾಸ್ಟ್ ಮಂಗಳೂರು ಜಂಕ್ಷನ್‌ನಿಂದ ಅಪರಾಹ್ನ 1:55ಕ್ಕೆ ಹೊರಟು ಮರುದಿನ ಬೆಳಿಗ್ಗೆ 4:25ಕ್ಕೆ ಸಿಎಸ್ಟಿಎಮ್ ತಲುಪಲಿದೆ ಹಾಗು ಅಲ್ಲಿಂದ ರಾತ್ರಿ 10ಕ್ಕೆ ಹೊರಟು ಮರುದಿನ ಅಪರಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಇದೇ ರೀತಿ ಕೊಂಕಣ್ ರೈಲ್ವೆಯಲ್ಲಿ ಚಲಿಸುವ ಎಲ್ಲ ರೈಲುಗಳು ಖಾಯಂ ಸಮಯದ ವೇಳಾಪಟ್ಟಿಯಂತೆ ಚಲಿಸಲಿವೆ ಎಂದು ಉಡುಪಿ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.







