ಕುರ್ಕಾಲು ಅಪಹರಣ ಪ್ರಕರಣ: ಮತ್ತಿಬ್ಬರ ಬಂಧನ

ಶಿರ್ವ, ಅ.31: ಕುರ್ಕಾಲು ಸುಭಾಶ್‌ನಗರದ ಶಿವಪ್ರಸಾದ್ ಹಾಗೂ ಮಂಜುನಾಥ್ ಎಂಬವರನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಅಲೆವೂರಿನ ಗುರುಪ್ರಸಾದ್(32) ಹಾಗೂ ಉದ್ಯಾವರ ಬಲಾಯಿ ಪಾದೆಯ ಸಂದೀಪ್(28) ಬಂಧಿತ ಆರೋಪಿಗಳು. ಇದೀಗ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಾದ ಸುಜಿತ್, ಮುನ್ನಾ ಎಂಬವರಿಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಗುರುಪ್ರಸಾದ್ ರೌಡಿ ಪಿಟ್ಟಿ ನಾಗೇಶ್ ಕೊಲೆ, ಕೊಲೆಯತ್ನ ಹಾಗೂ ದರೋಡೆ ಪ್ರಕರಣಗಳ ಆರೋಪಿಯಾಗಿದ್ದು, ಸಂದೀಪ್ ಇತ್ತೀಚೆಗೆ ನಡೆದ ಕುಂಜಿಬೆಟ್ಟು ಕಾನೂನು ಕಾಲೇಜಿನ ವಿದ್ಯಾರ್ಥಿ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಅ.29ರಂದು ಕ್ಷುಲ್ಲಕ ಕಾರಣಕ್ಕಾಗಿ ಶಿವಪ್ರಸಾದ್ ಹಾಗೂ ಮಂಜು ನಾಥ್ ಎಂಬವರನ್ನು ಅಪಹರಿಸಿ ಅಲೆವೂರು ಶಾಲೆ ನೆಹರೂ ಮೈದಾನಕ್ಕೆ ಕರೆದು ಕೊಂಡು ಹೋಗಿ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಶಿರ್ವ ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಿನ್ನೆ ಬಂಧಿಸಲ್ಪಟ್ಟ ಆರೋಪಿಗಳಾದ ದೀಪಕ್, ದೀಕ್ಷಿತ್, ನಿತೇಶ್, ಉಜ್ವಲ್, ಸುಮಂತ್, ಸತ್ಯರಾಜ್ ಅವರನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದ್ದು, ಇಂದು ಬಂಧಿಸಲ್ಪಟ್ಟ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.







