ಪದವೀಧರ ಕ್ಷೇತ್ರದ ಮತದಾರ ಪಟ್ಟಿ: ಹೆಸರು ಸೇರ್ಪಡೆಗೆ ನ.7 ಕೊನೆಯ ದಿನ
ಮಂಗಳೂರು, ಅ. 31: ಕರ್ನಾಟಕ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ನ.1 ಅರ್ಹತ ದಿನವನ್ನಾಗಿಟ್ಟು ಹೊಸದಾಗಿ ತಯಾರಿಸಲಾಗುತ್ತಿದೆ. ಭಾತರ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ 18 ಮತ್ತು 19ರಲ್ಲಿ ಅರ್ಜಿ ಸಲ್ಲಿಸಲು ನ. 7 ಕೊನೆಯ ದಿನವಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅರ್ಹ ಪದವೀಧರರು ಮತ್ತು ಶಿಕ್ಷಕರು ತಮ್ಮ ಅರ್ಜಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಹಾಗೂ ಪಾಲಿಗೆ ವ್ಯಾಪ್ತಿಯ ನಿಯೋಜಿತ ಅಧಿಕಾರಿ ಅವರಿಗೆ ಪಾಲಿಕೆಯ ಲಾಲ್‌ಬಾಗ್ ಕಚೇರಿಯ ಚುನಾವಣಾ ವಿಭಾಗದಲ್ಲಿ ನ.7ರ ಅಪರಾಹ್ಣ 5 ಗಂಟೆಯೊಳಗೆ ಸಲ್ಲಿಸುವಂತೆ ಪಾಲಿಕೆಯ ಪ್ರಕಟನೆ ತಿಳಿಸಿದೆ.
Next Story





