ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಒತ್ತಾಯ: ಪ್ರಧಾನಿ ಮೋದಿ, ಸುಪ್ರೀಂ ಸಿಜೆಗೆ ಮನವಿ ಸಲ್ಲಿಸಲು ವಕೀಲರ ಸಂಘ ತೀರ್ಮಾನ
ಬೆಂಗಳೂರು, ಅ.31: ಹೈಕೋರ್ಟ್‌ನಲ್ಲಿ ಖಾಲಿ ಇರುವ 38 ನ್ಯಾಯಮೂರ್ತಿಗಳ ಹುದ್ದೆಯನ್ನು ಶೀಘ್ರವೇ ಭರ್ತಿ ಮಾಡಲು ಒತ್ತಾಯಿಸಿ ಬೆಂಗಳೂರು ವಕೀಲರ ಸಂಘ ನಿರ್ಣಯ ಕೈಗೊಂಡಿದ್ದು, ಈ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ.
ಡಿಸೆಂಬರ್ 15ರೊಳಗೆ ನ್ಯಾಯಮೂರ್ತಿಗಳನ್ನು ಭರ್ತಿ ಮಾಡದಿದ್ದರೆ, ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸಲು ಬೆಂಗಳೂರು ವಕೀಲರ ಸಂಘ ನಿರ್ಣಯ ಕೈಗೊಂಡಿದೆ.
ಸಭೆಯಲ್ಲಿ ಬೆಂವಸ ಅಧ್ಯಕ್ಷ ಎಚ್.ಸಿ.ಶಿವಮಾದು, ಪ್ರಧಾನ ಕಾರ್ಯದರ್ಶಿ ಪುಟ್ಟೆಗೌಡ, ಖಜಾಂಚಿ ಎಚ್.ವಿ.ಪ್ರವೀಣ್‌ಗೌಡ ಮತ್ತಿತರರು ಉಪಸ್ಥಿತರಿದ್ದರು.
Next Story





