‘ಕರಾಳ ದಿನಾಚರಣೆ’ ಎಂಇಎಸ್‌ಗೆ ಜಿಲ್ಲಾಡಳಿತದ ಅನುಮತಿ
ಬೆಳಗಾವಿ, ಅ.31: ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ಆಚರಿಸುವ ‘ಕರಾಳ ದಿನಾಚರಣೆ’ಗೆ ಬೆಳಗಾವಿ ಜಿಲ್ಲಾಡಳಿತ ಶರತ್ತುಬದ್ಧ ಅನುಮತಿ ನೀಡಿದೆ.
ರ್ಯಾಲಿಯಲ್ಲಿ ಯಾವುದೇ ಜಾತಿ, ಭಾಷೆಯ ವಿರುದ್ಧ ಘೋಷಣೆ ಕೂಗುವಂತಿಲ್ಲ. ಪ್ರಚೋದನಾಕಾರಿ ಭಿತ್ತಿಪತ್ರ ಪ್ರದರ್ಶನ, ಭಾಷಣ ಮಾಡುವಂತಿಲ್ಲ. ಸೈಕಲ್ ರ್ಯಾಲಿ ವೇಳೆಯಲ್ಲಿ ಯಾವುದೇ ಮಾರಕಾಸ್ತ್ರ ಪ್ರದರ್ಶನ ಮಾಡುವಂತಿಲ್ಲ. ರ್ಯಾಲಿ ಸಂದರ್ಭದಲ್ಲಿ ಯಾವುದೇ ಬಗೆಯ ನಷ್ಟ ಸಂಭವಿಸಿದರೆ ಅದಕ್ಕೆ ಎಂಇಎಸ್ ನೇರ ಹೊಣೆ ಎಂದು ಸೈಕಲ್ ರ್ಯಾಲಿಯ ಆಯೋಜಕ ಹಾಗೂ ಎಂಇಎಸ್ ಅಧ್ಯಕ್ಷ ದೀಪಕ ದಳವಿಯಿಂದ ಕರಾರು ಪತ್ರವನ್ನು ಬರೆಸಿಕೊಂಡು ಪೊಲೀಸರು ಅನುಮತಿ ನೀಡಿದ್ದಾರೆ.
Next Story





