ಅಫ್ಘಾನ್: ರಾಜತಾಂತ್ರಿಕ ವಲಯದಲ್ಲಿ ಸ್ಫೋಟ; 3 ಸಾವು

ಕಾಬೂಲ್, ಅ. 31: ಕಾಬೂಲ್‌ನ ಅತ್ಯಂತ ಬಿಗಿ ಭದ್ರತೆಯ ರಾಜತಾಂತ್ರಿಕ ವಲಯದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ಮಂಗಳವಾರ ತನ್ನ ಮೋಟಾರ್ ಬೈಕನ್ನು ಸ್ಫೋಟಿಸಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
ಮೇ 31ರಂದು ಅತಿ ಭದ್ರತೆಯ ‘ಹಸಿರು ವಲಯ’ದಲ್ಲಿ ಬೃಹತ್ ಟ್ರಕ್ ಬಾಂಬ್ ದಾಳಿ ನಡೆದ ಬಳಿಕ ಅಲ್ಲಿ ದಾಳಿ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಆ ದಾಳಿಯಲ್ಲಿ 100 ಮಂದಿ ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ.
‘‘ಆತ್ಮಹತ್ಯಾ ಬಾಂಬರ್ ಮೊದಲ ತಪಾಸಣಾ ದ್ವಾರದ ಮೂಲಕ ಒಳ ನುಗ್ಗಿದನು ಹಾಗೂ ಆದರೆ, ಆತನನ್ನು ಎರಡನೆ ದ್ವಾರದಲ್ಲಿ ನಿಲ್ಲಿಸಲಾಯಿತು. ಆ ಸಂದರ್ಭದಲ್ಲಿ ಆತ ತನ್ನನ್ನು ತಾನು ಸ್ಫೋಟಿಸಿಕೊಂಡನು’’ ಎಂದು ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
Next Story





