ನ. 3. ಕುಟುಂಬ ವ್ಯವಹಾರಗಳ ಬಗ್ಗೆ ರಾಷ್ಟ್ರೀಯ ಕಾರ್ಯಾಗಾರ
ಮಂಗಳೂರು, ಅ. 31: ಜಾಗತೀಕರಣದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಕುಟುಂಬ ವ್ಯವಹಾರಗಳ ಆಳ ಮತ್ತು ಅರಿವುಗಳನ್ನು ಶೈಕ್ಷಣಿಕವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ನಗರದ ಬೊಂದೇಲಿನಲ್ಲಿರುವ ಬೊಂದೇಲ್‌ನಲ್ಲಿರುವ ಮಣೇಲ್ ಶ್ರೀನಿವಾಸ ನಾಯಕ್ ಸ್ಮಾರಕ ಬೆಸಂಟ್ ಸ್ನಾತಕೋತ್ತರ ಸಂಸ್ಥೆಯ ವತಿಯಿಂದ ‘ಕುಟುಂಬ ವ್ಯವಹಾರ ಸವಾಲುಗಳು ಮತ್ತು ಅವಕಾಶಗಳು (Family Business: Opportunities, Challenges & Issues ) ಎನ್ನುವ ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ನ. 3ರಂದು ನಗರದ ಬೊಂದೇಲಿನಲ್ಲಿರುವ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕುಟುಂಬದ ವ್ಯವಹಾರವು ಅತ್ಯಂತ ಹಳೆಯ ಆರ್ಥಿಕ ವ್ಯವಸ್ಥೆಯಾಗಿದ್ದು ಜಗತ್ತಿನಾದ್ಯಂತ ಅಸ್ತಿತ್ವದಲ್ಲಿದೆ. ಪ್ರಪಂಚದ ಶೇ. 80ರಷ್ಟು ವ್ಯವಹಾರವು ಕುಟುಂಬಗಳು ನಿಯಂತ್ರಿಸುತ್ತವೆ. ಮಾಲಕತ್ವದ ವಿಷಯದಲ್ಲಿ ಕುಟುಂಬದ ವ್ಯವಹಾರಗಳು ಅತಿ ದೊಡ್ಡ ಗಾತ್ರವನ್ನು ಹೊಂದಿದ್ದು ಒಟ್ಟು ರಾಷ್ಟ್ರೀಯ ಉತ್ಪನ್ನ, ಉದ್ಯೋಗ ಮತ್ತು ರಫ್ತು ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಾ ಬಂದಿದೆ. ಭಾರತದಲ್ಲಿ ಟಾಟಾ, ಬಿರ್ಲಾ, ಅಂಬಾನಿ, ಗೋದ್ರೆಜ್ ಮುಂತಾದ ಕುಟುಂಬ ವ್ಯವಹಾರಗಳು ಶ್ರೀ ಮಂತ ಮತ್ತು ಅದ್ಭುತ ಇತಿಹಾಸವನ್ನು ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.
ಕಾರ್ಯಾಗಾರವನ್ನು ಆರ್.ಬಿ.ಐ.ನ ಮಾಜಿ ಡೆಪ್ಯುಟಿ ಗವರ್ನರ್ ವಿಟ್ಠಲ್ ದಾಸ್ ಲೀಲಾಧರ್ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಫಸ್ಟ್ ಬೆಸ್ಟ್ ಕನ್ಸಲ್ಟಂಟ್ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ್ ಕಿಣಿ, ಟಾಟಾ ಕಾಫಿ ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಎಂ.ಬಿ.ಗಣಪತಿ, ನ್ಯಾಚುರಲ್ ಐಸ್ ಕ್ರೀಂ ನ ಮುಖ್ಯಸ್ಥ ರಘುನಂದನ್ ಕಾಮತ್, ಕಾಮತ್ಸ್ ಐಸ್ ಕ್ರೀಮ್ನ ನಿರ್ದೇಶಕ ನಿವಾಸ್ ಕಾಮತ್ ಮುಂತಾದವರು ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ದೇಶಾದ್ಯಂತ ವಿವಿಧ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ಬೆಸೆಂಟ್ ಸ್ನಾತಕೋತ್ತರ ಸಂಸ್ಥೆಯ ನಿರ್ದೇಶಕ ಡಾ. ನಾರಾಯಣ ಕಾಯರ್ ಕಟ್ಟೆಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







