ನ. 3ರಂದು ಆಸ್ಪತ್ರೆಗಳು ಬಂದ್: ಜಿಲ್ಲಾ ಆಯುಷ್ ಬೆಂಬಲ
ಪಡುಬಿದ್ರೆ, ನ. 1: ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಎಲ್ಲಾ ಲ್ಯಾಬ್‌ಗಳು ತುರ್ತು ಸೇವೆಯನ್ನು ಸೇರಿದಂತೆ ವೈದ್ಯಕೀಯ ಸೇವೆ ನ. 3ರಂದು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡಿರುತ್ತದೆ.
ಕರ್ನಾಟಕ ರಾಜ್ಯ ಜಾರಿಗೊಳಿಸಲು ನಿರ್ಧರಿಸುವ ಖಾಸಗಿ ಆಸ್ಪತ್ರೆ ವಿಧೇಯಕವನ್ನು ವಿರೋಧಿಸಿ ರಾಜ್ಯದ ಎಲ್ಲಾ ವೈದ್ಯಕೀಯ ಸೇವೆಗಳು, ಆಸ್ಪತ್ರೆಗಳು ಹಾಗೂ ಲ್ಯಾಬ್‌ಗಳು ಬಂದ್ ಆಚರಿಸುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ನಿರ್ಧರಿಸಿದೆ. ವೈದ್ಯ ಬಂಧುಗಳು ಅಂದು ಬೆಳಗ್ಗೆ 6 ಗಂಟೆಯಿಂದ ಮರುದಿನ 6 ಗಂಟೆಯವರೆಗೆ ಬಂದ್ ಆಚರಿಸುವ ಮೂಲಕ ಭಾರತೀಯ ವೈದ್ಯ ಸಂಘಟನೆಯ ಜೊತೆಗೂಡಿ ಸಹಕರಿಸುವಂತೆ ಉಡುಪಿ ಜಿಲ್ಲಾ ಆಯುಷ್ ಅಧ್ಯಕ್ಷ ಡಾ. ಎನ್. ಟಿ. ಅಂಚನ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Next Story





