ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ಧ ಭೋವಿ ಸಮಾಜದ ಆಕ್ರೋಶ

ಕಡೂರು, ನ.1: ಕಲರ್ಸ್ ಸೂಪರ್ ಚಾನಲ್‍ನಲ್ಲಿ ಅ.27 ರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಬಗ್ಗೆ ಹೀಯಾಳಿಸಿ ಮಾತನಾಡಿದ ನಟ ಸಿಹಿಕಹಿ ಚಂದ್ರು ಕೂಡಲೇ ಕ್ಷಮೆ ಕೇಳಬೇಕೆಂದು ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಕೊಲ್ಲಾಭೋವಿ ಆಗ್ರಹಿಸಿದ್ದಾರೆ.
ಅವರು ಸಖರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭೋವಿ ಸಮಾಜವು ಕಷ್ಟಪಟ್ಟು ದುಡಿಯುವ ಸಮಾಜವಾಗಿದ್ದು, ಯಾರಿಗೂ ತೊಂದರೆ ಮಾಡದೆ ಬದುಕುತ್ತಿದ್ದಾರೆ. ಆದರೂ ವಿನಾಕಾರಣವಾಗಿ ಈ ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಕಲರ್ಸ್ ಸೂಪರ್ ಚಾನಲ್ ನವರು ಸಹ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಕಡೂರು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಪಾಲಾಕ್ಷಪ್ಪ, ತರೀಕೆರೆ ಅಧ್ಯಕ್ಷ ಶ್ರೀರಾಮುಲು, ಸಮಾಜ ಮುಖಂಡರಾದ ಬಸವರಾಜು ಮತ್ತಿತರರಿದ್ದರು.
Next Story





