ಚಾಮರಾಜನಗರ : ಕನ್ನಡ ರಾಜ್ಯೋತ್ಸವ ಆಚರಣೆ

ಚಾಮರಾಜನಗರ, ನ.1: ನಗರಸಭಾ ಕಚೇರಿ ಆವರಣದಲ್ಲಿ 62ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ನಗರಸಭಾ ಅಧ್ಯಕ್ಷ ಶೋಭಾ ಪುಟ್ಟಸ್ವಾಮಿ ನೆರವೇರಿಸಿದರು. ಭುವನೇಶ್ವರಿ ಭಾವಚಿತ್ರಕ್ಕೆ ನಗರಸಭಾ ಉಪಾಧ್ಯಕ್ಷ ರಾಜಪ್ಪ ಪುಷ್ಪಾರ್ಚಣೆ ಮಾಡಿದರು.
ಈ ಸಂದರ್ಭದಲ್ಲಿ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಉಮೇಶ್, ನಗರಸಭಾ ಸದಸ್ಯರಾದ ರಾಜಗೋಪಾಲ್, ರೇಣುಕಾ, ಪ್ರವೀಣ್, ಆಯುಕ್ತ ರಾಜಣ್ಣ, ಎಇಇ ಸತ್ಯಮೂರ್ತಿ, ವ್ಯವಸ್ಥಾಪಕಿ ರೀಟಾ, ಶರವಣ, ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.
---------------------------------------------------------
ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ 62 ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ನೆರವೇರಿಸಿದರು. ಈ ಸಂದಭ್ದಲ್ಲಿ ಜಿ.ಪಂ.ಸದಸ್ಯ ಸದಾಶಿವ ಮೂರ್ತಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಮಹಮ್ಮದ್ ಅಜ್ಗರ್ ಮುನ್ನಾ, ಎಸ್,ಪುಟ್ಟಸ್ವಾಮಿ, ತಾ.ಪಂ.ಸದಸ್ಯ ಪಿ.ಕುಮಾರ್, ಚೂಡಾ ಮಾಜಿ ಅಧ್ಯಕ್ಷ ಸಯ್ಯದ್ ರಫೀ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ್, ಮುಖಂಡರಾದ ರವೀಗೌಡ, ಶಿವಮೂರ್ತಿ, ಕಾಂತರಾಜು, ನಸ್ರುಲ್ಲಾಖಾನ್, ಮಲ್ಲಿಕ್ ಹಾಗೂ ಮತ್ತಿತರರು ಹಾಜರಿದ್ದಾರೆ.







