ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸದಾಶಿವ ಪ್ರಭುಗೆ ಡಾಕ್ಟರೇಟ್

ಮಂಗಳೂರು, ನ. 1: ಇಲ್ಲಿನ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ಸದಾಶಿವ ಪ್ರಭು ಅವರು ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ಡಾ. ಕಪಿಲನ್ ಮತ್ತು ಕೆಲಿಡೋನಿಯನ್ ಎಂಜಿನಿಯರಿಂಗ್ ಕಾಲೇಜಿನ ಡಾ.ನಾಗರಾಜ್ ಎಸ್. ನಾಯಕ್ ಅವರ ಮಾರ್ಗದರ್ಶನದಲ್ಲಿ ‘ಸಿಮ್ಯುಲೇಶನ್ ಸ್ಟಡಿ ಆಫ್ ಯೂರಿಯಾ ವಾಟರ್ ಸೊಲ್ಯೂಶನ್ ಇಂಜೆಕ್ಷನ್ ಸ್ಪ್ರೇ ಫಾರ್ ಡಿ ನೋಕ್ಸ್ ಸೆಲೆಕ್ಟಿವ್ ಕ್ಯಾಟಲಿಸ್ಟಿಕ್ ರಿಡಕ್ಷನ್ ಸಿಸ್ಟಮ್ ಆಫ್ ಡೀಸೆಲ್ ಎಂಜಿನ್ಸ್’ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾದ್ಯಾಲಯವು ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಸದಾಶಿವ ಪ್ರಭು ಅವರು ಕುಂದಾಪುರ ಮಡಾಮಕ್ಕಿಯ ಎಂ.ದೇವದಾಸ ಪ್ರಭು, ಯಶೋಧಾ ಪ್ರಭು ದಂಪತಿಯ ಪುತ್ರ.
Next Story





