ನ.15ರಿಂದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಕರಾವಳಿಗೆ
ಉಡುಪಿ, ನ.1: ಸಾರ್ವಜನಿಕರು ಸಲ್ಲಿಸಿರುವ ದೂರುಗಳ ತ್ವರಿತ ವಿಚಾರಣೆ ಹಾಗೂ ವಿಲೇವಾರಿ ದೃಷ್ಚಿಯಿಂದ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ್ ಶೆಟ್ಟಿ ಅವರು ನ.15ರಿಂದ 19ರವರೆಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನ.18ರಂದು ಬೆಳಗ್ಗೆ 10:30ರಿಂದ ಸಂಜೆಯವರೆಗೆ ದೂರು ಅರ್ಜಿಗಳ ವಿಚಾರಣೆಯನ್ನು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ನ.17ರ ಅಪರಾಹ್ನ 2ರಿಂದ ನಿಗದಿತ ನಮೂನೆ 1 ಮತ್ತು 2ರಲ್ಲಿ ಅರ್ಜಿಗಳನ್ನು ಉಡುಪಿಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಡಬ ಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರ ಪ್ರವಾಸ ಕಾರ್ಯಕ್ರಮ ಹೀಗಿದೆ. ನ.15ರಂದು ಸಂಜೆ 4ಕ್ಕೆ ಉಡುಪಿ ಪ್ರವಾಸಿ ಮಂದಿರಕ್ಕೆ. ನ.16ರ ಬೆಳಗ್ಗೆ 10:15ಕ್ಕೆ ಮಂಗಳೂರು ಪ್ರವಾಸಿ ಮಂದಿರಕ್ಕೆ, 10:45ರಿಂದ ಅಪರಾಹ್ನ 2:00ರವರೆಗೆ ವಿವಿಧ ಕಚೇರಿ, ಹಾಸ್ಟೆಲ್, ಆಸ್ಪತ್ರೆಗಳಿಗೆ ಭೇಟಿ, 3:30ಕ್ಕೆ ಪುತ್ತೂರಿಗೆ, 5:00ಕ್ಕೆ ಪುತ್ತೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮ, 17ರಂದು ಬೆಳಗ್ಗೆ 10:30ಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ, ಸಾರ್ವಜನಿಕರ ಅಹವಾಲು ಸ್ವೀಕಾರ, ಅಪರಾಹ್ನ 2:30ರಿಂದ ದೂರುಗಳ ತನಿಖೆ, ಸಂಜೆ 7:00ಕ್ಕೆ ಉಡುಪಿಗೆ, ನ.18ರಂದು ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ದೂರುಗಳ ವಿಚಾರಣೆ, ರಾತ್ರಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ, ನ.19ರಂದು ಅಪರಾಹ್ನ 2:00ಕ್ಕೆ ಉಡುಪಿಯಿಂದ ಸಕಲೇಶಪುರ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ತೆರಳುವರು.







