ರೈಲು ಸಂಚಾರದಲ್ಲಿ ವ್ಯತ್ಯಯ
ಉಡುಪಿ, ನ.1: ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗದಲ್ಲಿ ನ.2ರಿಂದ 7ರವರೆಗೆ ಪಡೀಲ್ ಮತ್ತು ಜೋಕಟ್ಟೆ ಸಂಚಾರದಲ್ಲಿ ಅಪರಾಹ್ನ 3:15ರಿಂದ 5:15ರವರೆಗೆ ಎರಡು ಗಂಟೆಗಳ ಕಾಲ ತಡೆಯಾಗಲಿದ್ದು, ವ್ಯತ್ಯಯವಾಗಲಿದ್ದು, ಇದರಿಂದ ಡೆಮು ರೈಲಿನ ಸಂಚಾರದಲ್ಲಿ ವ್ಯತ್ಯಯವುಂಟಾಗಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ರೈಲು ನಂ.70105/70106 ಮಡಂಗಾವ್- ಮಂಗಳೂರು ಸೆಂಟ್ರಲ್- ಮಡಂಗಾವ್ ಪ್ಯಾಸೆಂಜರ್(ಡೆಮು) ರೈಲಿನ ಸಂಚಾರ ನ.2ರಿಂದ 7ರವರೆಗೆ 6ದಿನಗಳ ಕಾಲ ತೋಕೂರು- ಮಂಗಳೂರು ಸೆಂಟ್ರಲ್- ತೋಕೂರು ಮಧ್ಯೆ ಭಾಗಶ: ರದ್ದಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





