ಕನ್ನಡ ನಾಡು ನುಡಿಗಾಗಿ ಉಡುಪಿ-ಕುಂದಾಪುರ ಪಾದಾಯಾತ್ರೆ

ಉಡುಪಿ, ನ.1: ಕನ್ನಡ ನಾಡು ನುಡಿ ಸಂಸ್ಕ್ರತಿಯ ಉಳಿವಿಗಾಗಿ ಯುವ ಸಾಹಿತಿ ತಾರಾನಾಥ್ ಮೇಸ್ತ ಶಿರೂರು ಉಡುಪಿಯಿಂದ ಕುಂದಾಪುರದವರೆಗೆ ಕನ್ನಡ ರಾಜ್ಯೋತ್ಸವ ಜಾಗೃತಿ ಪಾದಯಾತ್ರೆಯನ್ನು ಬುಧವಾರ ಹಮ್ಮಿಕೊಂಡಿ ದ್ದರು.
ಉಡುಪಿಯ ಅಂಬಲಪಾಡಿ ಬೈಪಾಸಿನಲ್ಲಿ ಉಡುಪಿಯ ಸಮಾಜಸೇವಕ ರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ ಜಂಟಿಯಾಗಿ ನಾಡ ಧ್ವಜವನ್ನು ನೀಡುವ ಮೂಲಕ ಮೇಸ್ತ ಅವರ ಪಾದಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿವಾನಂದ ಮೂಡುಬೆಟ್ಟು, ಮಧುಕರ ಅಂಬಲಪಾಡಿ ಉಪಸ್ಥಿತರಿದ್ದರು.
ಕನ್ನಡ ಭಾಷೆ ಉಳಿಯಬೇಕು, ಪುಸ್ತಕ ಓದುವ ಹವ್ಯಾಸ ಹೆಚ್ಚಾಗಬೇಕು. ಕನ್ನಡ ಶಾಲೆಗಳು ಉಳಿಯಬೇಕು, ಮೊದಲು ಕನ್ನಡ ಮಾತನಾಡೋಣ, ನಂತರ ಇತರ ಭಾಷೆಗಳ ಕಲಿಯೋಣ ಎಂಬ ಜಾಗೃತಿ ಘೋಷ ವಾಕ್ಯಗಳ ಸಂದೇಶ ಕರಪತ್ರಗಳನ್ನು ಅವರು, ಪಾದಯಾತ್ರೆ ಉದ್ದಕ್ಕೂ ಸಾರ್ವಜನಿಕರಿಗೆ ಹಂಚಿಸಿ ದರು. ಹೀಗೆ ಅವರು 400ಕ್ಕೂ ಅಧಿಕ ಮಂದಿಯನ್ನು ಸಂಪರ್ಕಿಸಿದರು. ಹೆದ್ದಾರಿಯ ಉದ್ದಕ್ಕೂ ಕನ್ನಡ ಅಭಿಮಾನಿಗಳು ತಾರಾನಾಥ್ ಮೇಸ್ತ ಅವರನ್ನು ಅಭಿನಂದಿಸಿದರು. ಸಂಜೆ ಕುಂದಾಪುರದಲ್ಲಿ ಪಾದಯಾತ್ರೆ ಸಮಾಪ್ತಿಗೊಂಡಿತು.







