ನ. 2: ಮಿಥಾಲಿ ರಂಗಪ್ರವೇಶ
ಉಡುಪಿ, ನ.1: ರಾಧಾಕೃಷ್ಮ ನೃತ್ಯ ನಿಕೇತನದಲ್ಲಿ ವಿದುಷಿ ವೀಣಾ ಎಂ. ಸಾಮಗ ಅವರ ಶಿಷ್ಯೆಯಾಗಿ ಭರತನಾಟ್ಯ ಅಭ್ಯಸಿಸಿರುವ ಮಿಥಾಲಿ ಎಂ. ಶೆಟ್ಟಿ ಅವರ ರಂಗ ಪ್ರವೇಶ ಕಾರ್ಯಕ್ರಮ ನಾಳೆ ಸಂಜೆ 5:30ಕ್ಕೆ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಎಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವೀಣಾ ಎಂ.ಸಾಮಗ ತಿಳಿಸಿದರು.
ಡಾ.ಮನಮೋಹನ್ ಶೆಟ್ಟಿ ಹಾಗೂ ಲತಾ ಎಂ.ಶೆಟ್ಟಿ ಅವರ ಪುತ್ರಿಯಾಗಿರುವ ಮಿಛಾಲಿ ಎಂ.ಶೆಟ್ಟಿ ತನ್ನ ಐದನೇ ವಯಸ್ಸಿನಿಂದ ಭರತನಾಟ್ಯದ ಶಿಕ್ಷಣವನ್ನು ರಾಧಾಕೃಷ್ಣ ನೃತ್ಯ ನಿಕೇತನವನ್ನು ಮೊದಲು ದಿ.ರಾಧಾಕೃಷ್ಣ ತಂತ್ರಿಯವರ ಬಳಿ ಬಳಿಕ ಈಗಿನ ನಿರ್ದೇಶಕಿ ವೀಣಾ ಸಾಮಗ ಅವರ ಪಡೆದಿದ್ದಾರೆ.
ಭರತನಾಟ್ಯ ಜೂನಿಯರ್ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಿದ್ದು, ಈಗ ವಿದ್ವತ್ ಪರೀಕ್ಷೆಯ ಸಿದ್ಧತೆಯಲ್ಲಿದ್ದಾರೆ ಎಂದರು. ಆಕೆ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾರೆ ಎಂದು ವಿವರಿಸಿದರು.
ಮಿಥಾಲಿ ರಂಗಪ್ರವೇಶದ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ. ಭಾಸ್ಕರಾನಂದ ಕುಮಾರ್, ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಶ್ರೀನಿವಾಸ ರಾವ್, ತಲ್ಲೂರು ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವೀಣಾ ಸಾಮಗ ತಿಳಿಸಿದರು.







